ಬಂಟ್ವಾಡಿ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ರಘುರಾಮ ನಾಯ್ಕ್‍ಗೆ ಬೀಳ್ಕೊಡುಗೆ

Share

ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಸುಮಾರು 39 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಗೊಂಡಿರುವ ಶಾಲಾ ಮುಖ್ಯೋಪಾಧ್ಯಾಯರಾದ ರಘುರಾಮ ನಾಯ್ಕ್ ಅವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಹಾಗೂ ವಿದ್ಯಾರ್ಥಿ ಪೋಷಕರ ಸಂಘದ ವತಿಯಿಂದ ಬಂಟ್ವಾಡಿ ಶಾಲೆಯಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯ ರಘುರಾಮ ನಾಯ್ಕ್ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ವಿದ್ಯಾರ್ಥಿಗಳು ಸಮಾಜದಲ್ಲಿ ಸುಶಿಕ್ಷಿತರಾಗಿ ಬಾಳಿದಾಗ ಮಾತ್ರ ಶಿಕ್ಷಕರ ಪರಿಶ್ರಮ ಸಾರ್ಥಕಗೊಳ್ಳುತ್ತದೆ.ಅಪರಿಚಿತ ಊರಿನಲ್ಲಿ ಶಿಕ್ಷಕ ಸೇವೆ ಮಾಡಲು ಬಂದಂತಹ ಸಮಯದಲ್ಲಿ ಊರಿನವರು ತೋರಿಸಿದ ಪ್ರೀತಿ ಸದಾ ಕಾಲ ಉಳಿದುಕೊಳ್ಳಲಿದೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಮೊಗವೀರ ಮಾತನಾಡಿ,ಶಾಲಾ ಮುಖ್ಯೋಪಾಧ್ಯಾಯರು ನಿವೃತ್ತಿಗೊಂಡಿರುವುದರಿಂದ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ.ಶಿಕ್ಷಣ ಇಲಾಖೆ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಕ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.
ಶಾಲಾ ಸಂಚಾಲಕ ಅರುಣ್‍ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರೊಫೆಸರ್ ಕೆಆರ್‍ಇಸಿ ಸುರತ್ಕಲ್ ಜಯಕರ ಹೆಗ್ಡೆ ಸನ್ಮಾನಿಸಿ ಶುಭಹಾರೈಸಿದರು.ಉದ್ಯಮಿ ರಾಮರಾಯ್ ಕಾಮತ್,ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ನಾಗೇಶ್ ಶ್ಯಾನುಭಾಗ್,ದುಬೈ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಹಾಡಿಮನೆ,ನಿವೃತ್ತ ಅಂಗನವಾಡಿ ಶಿಕ್ಷಕಿ ಲೀಲಾವತಿ ಹೆಬ್ಬಾರ್ ಕೆಳಾಕಳಿ,ಶಾಲಾ ವಿದ್ಯಾರ್ಥಿ ಪೋಷಕರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಬಂಟ್ವಾಡಿ,ಮಕ್ಕಳ ಪೆÇೀಷಕರು,ಹಳೆ ವಿದ್ಯಾರ್ಥಿಗಳು,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅರುಣ್ ಕುಮಾರ್ ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಭು ನಿರೂಪಿಸಿದರು.ಶ್ರೀಕಾಂತ ಶ್ಯಾನುಭಾಗ್ ವಾಚಿಸಿದರು.ಗೌರವ ಶಿಕ್ಷಕಿ ಪಲ್ಲವಿ ವಂದಿಸಿದರು.ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ಶಿಕ್ಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.



Advertisement

Share

Leave a comment

Your email address will not be published. Required fields are marked *

You cannot copy content of this page