ಮಂಜುನಾಥ ಸಾಲಿಯಾನ್ ಪರಿಯಾಳ ಸಮಾಜ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ:ಪರಿಯಾಳ ಸಮಾಜ ಮಹಾಸಭಾ ಮಂಗಳೂರು ಅದರ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಂಜುನಾಥ್ ಸಾಲಿಯಾನ್ ತ್ರಾಸಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಪ್ರವೀಣ್ ಸಾಲಿಯಾನ್ ಕಾಫಿ ಕಾಡು ಮಂಗಳೂರು,ಕಾರ್ಯದರ್ಶಿಯಾಗಿ ಸಂದೀಪ್ ಸಾಲಿಯಾನ್ ಹಾರಾಡಿ,ಕೋಶಾಧಿಕಾರಿಯಾಗಿ ಗೌತಮ್ ಬಂಗೇರ ಕರಂಬಾರು ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ಪರಿಯಾಳ ಸಮಾಜ ಸಮುದಾಯ ಭವನ ಉಚ್ಚಿಲದಲ್ಲಿ ನಡೆದ ಸಂಘದ ಎರಡನೇ ವಾರ್ಷಿಕ ಮಹಾಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.