ಮಂಗಳೂರು:ಕುಕ್ಕಿಲದಲ್ಲಿ ಗುಡ್ಡೆ ಕುಸಿತ ಎರಡು ಮನೆಗಳಿಗೆ ಹಾನಿ

ಮಂಗಳೂರು:ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಭಾಗಶಃ: ಹಾನಿಯಾಗಿದೆ. ಮನೆಯವರೆಲ್ಲ ಅದೃಷ್ಟವಶಾತ್ ಪಾರಾಗಿದ್ದಾರೆ.
ಕುಕ್ಕಿಲ ನಿವಾಸಿ ಕಟ್ಟಪುಣಿ ಅಬ್ದುಲ್ಲ ಹಾಜಿಯವರ ಮನೆ ಬಳಿಯ ಗುಡ್ಡ ಕುಸಿದು ಬಿದ್ದಿದೆ. ಅದೇ ರೀತಿ ಅಬ್ದುಲ್ ರಹಿಮಾನ್ ಎಂಬವರ ಮನೆ ಹಿಂಬದಿಯ ಎತ್ತರದ ಗುಡ್ಡ ಕುಸಿದು ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ.ದುರಂತದ ಸಂದರ್ಭದಲ್ಲಿ ಶಬ್ದ ಕೇಳಿಸಿಕೊಂಡ ಮನೆಯವರೆಲ್ಲ ಹೊರಗಡೆ ಓಡಿದ್ದರಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































