ಬಾವಿಯೊಳಗೆ ಅವಿತು ಕೊಂಡಿದ್ದ ಮೊಸಳೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು




ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕೊಡೇರಿ ವಿಶ್ವನಾಥ ಉಡುಪ ಅವರಿಗೆ ಸಂಬಂಧಿಸಿದ ಬಾವಿಯೊಳಗೆ ಮಂಗಳವಾರ ಪತ್ತೆಯಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಬೀಡಿನ ಬಲೆಯನ್ನು ಬಾವಿ ಒಳಗೆ ಬಿಡುವುದರ ಮೂಲಕ ಸುರಕ್ಷಿತವಾಗಿ ಮೊಸಳೆಯನ್ನು ಬುಧವಾರ ಸೆರೆ ಹಿಡಿಯಲಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಬಾವಿಯೊಳಗೆ ಅವಿತುಕೊಂಡಿದ್ದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯಲು ಮಂಗಳವಾರ ಬೊನ್ ಇಟ್ಟು ಹಲವು ಉಪಕ್ರಮಗಳನ್ನು ಬಳಕೆ ಮಾಡಿದ್ದರು ಯಾವುದೆ ರೀತಿ ಪ್ರಯೋಜನೆ ಆಗಿರಲಿಲ್ಲ.ಸಿಸಿಟಿವಿ ಮೂಲಕ ರಾತ್ರಿಯಿಡಿ ಮೊಸಳೆ ಚಲನವಲನದ ಬಗ್ಗೆ ನಿಗಾವನ್ನು ಇಡಲಾಗಿತ್ತು.ಸ್ಥಳೀಯ ಮೀನುಗಾರರ ಸಲಹೆಯೊಂದಿಗೆ ಬುಧವಾರ ವಿಶೇಷ ಕಾರ್ಯಚರಣೆ ನಡೆಸಿ ಬೃಹತ್ ಗಾತ್ರದ ಮೊಸಳೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.ಆರೋಗ್ಯವಂತಹ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.ಮೂರು ನಾಲ್ಕು ದಿನದ ಹಿಂದೆಯೆ ಮೊಸಳೆ ಗದ್ದೆ ಬೈಲಿನಲ್ಲಿ ಪತ್ತೆ ಹೊರಳಾಡಿಕೊಂಡು ಹೋಗಿರುವ ಬಗ್ಗೆ ಕುರುಹು ಪತ್ತೆ ಆಗಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಕಂದಾಯ ಇಲಾಖೆ,ಪಶು ವೈದ್ಯಾಧಿಕಾರಿಗಳು ಸ್ಥಳೀಯರು,ಅಗ್ನಿ ಶಾಮಕದಳದ ಸಿಬ್ಬಂದಿಗಳು, ಮೀನುಗಾರರು ಭಾಗವಹಿಸಿದ್ದರು.
ಅರಣ್ಯಾಧಿಕಾರಿ ಸಂದೇಶ್ ಮಾತನಾಡಿ,ಕಾರ್ಯಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.