ಐ ಟೀಚ್ ಕೋಚಿಂಗ್ ಅಕಾಡೆಮಿ ಕುಂದಾಪುರದಲ್ಲಿ ಶುಭರಂಭ

Share

Advertisement
Advertisement
Advertisement

ಕುಂದಾಪುರ:ನೂತನವಾಗಿ ಆರಂಭಗೊಂಡಿರುವ ಐ ಟೀಚ್ ಅಕಾಡೆಮಿ ಕೋಚಿಂಗ್ ಸೆಂಟರ್ ನಲ್ಲಿ 5 ರಿಂದ 10 ನೇ ತರಗತಿಯವರೆಗೆ state, CBSE, ICSE ಎಲ್ಲಾ ವಿಷಯ ಗಳ ಕುರಿತು ಟ್ಯೂಷನ್ ನೀಡಲಾಗುತ್ತದೆ ಹಾಗೂ 11th to 12th maths, physics, chemistry ಮತ್ತು CET ಕ್ರ್ಯಾಶ್ ಕೋರ್ಸ್ಗಳು ಅನುಭವ ಮತ್ತು ಅರ್ಹ ಶಿಕ್ಷಕರು ಗಳಿಂದ ತರಬೇತಿ ನೀಡಲಾಗುತ್ತದೆ ಮತ್ತು ವಿಶೇಷವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಾದ್ಯ ಸಂಗೀತ ತರಬೇತಿ ಯನ್ನು ನೀಡಲಾಗುವುದು ನಮಲ್ಲಿ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ಸ್ಯಾಕ್ಸೋಫೋನ್, ಕೊಳ್ಳಲು, ವೀಣೆ, ತವಿಲ್, ರಿದo ಪ್ಯಾಡ್, ತಬಲ್ ಹಾಗೂ ಇನಿತರ ವಾದ್ಯಸಂಗೀತಗಳ ತರಬೇತಿಯನ್ನು ಕೂಡ ನೀಡಲಾಗುತ್ತದೆ.
ಹೆಸರಾಂತ ಕೊಳಲು ಗುರುಗಳಾದ ಪ್ರದೀಪ್ ದೇವಾಡಿಗ ಕಾರ್ಕಳ ಅವರು ಮಾತನಾಡಿ,ಇವತ್ತಿನ ವೇಗದ ದಿನಮಾನದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ಕೊಳಲು, ನೃತ್ಯ ಸಂಗೀತದಂತಹ ಕಲೆಗಳ ಮೂಲಕ ಮಕ್ಕಳಿಗೆ ತಿಳಿಯಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಯುವ ಸಮಾಜ ಅಪಾಯಕಾರಿ ಸ್ಥಿತಿಯತ್ತ ಸಾಗುವುದನ್ನು ತಡೆಯಲಾಗದು”ಎಲ್ಲೆಡೆ ಸಂಗೀತ ತರಗತಿಗಳ ಮೂಲಕ ಮಕ್ಕಳಲ್ಲಿ ಕಲಾಸಕ್ತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯಲಿ ಭಾರತೀಯತೆಯನ್ನು ಉಳಿಸುವ ಅಗತ್ಯ ನಮ್ಮ ಮುಂದಿದೆ” ಹೆಚ್ಚಿನ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದು ಕೊಳಬೇಕು ಎಂದು ಶುಭ ಹಾರೈಸಿದರು.
ಐ ಟೀಚ್ ಸಂಗೀತ ತರಬೇತಿ ನಿರ್ವಾಹಕ ನಿತ್ಯಾನಂದ ದೇವಾಡಿಗ ಕುಂದಾಪುರ ಮಾತನಾಡಿ,ಕರ್ನಾಟಕ ಶಾಸ್ತ್ರೀಯ ಸಂಗೀತ ವನ್ನು ಬೆಳೆಸುವ ಮತ್ತು ಉಳ್ಳಿಸುವ ಹಿತದೃಷ್ಟಿ ಇಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಮತ್ತು
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು,ಪರೀಕ್ಷಾ ಸಿದ್ಧತೆ ಹೇಗಿರಬೇಕು ಎಂಬ ಜತೆಗೆ ಪ್ರತಿ ವಿಷಯದ ವಿಸ್ತೃತವಾದ ವಿವರಣೆಯನ್ನು ನೀಡಲಾಗುತ್ತದೆ.ಮತ್ತು ಪ.ಪೂ. ಕಾಲೇಜುಗಳ ವಿದ್ಯಾರ್ಥಿಗಳಿಗೆ ನುರಿತ ಉಪನ್ಯಾಸಕರು ಗಳಿಂದ ಸಿಇಟಿ ಕ್ರ್ಯಾಶ್ ಕೋಚಿಂಗ್‌ ನೀಡಲಾಗುತ್ತದೆ.
ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಹಿರಿಯ ವಾದ್ಯ ಕಲಾವಿದರಾದ ಸಂಜೀವ ದೇವಾಡಿಗ,ಕುಂದಾಪುರ, ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಹಾಗೂ ಹೋಟೆಲ್
ಉದ್ಯಮಿ ಶಂಭು ಸುವರ್ಣ ಮತ್ತು ಶರತ್ ಸುವರ್ಣ ಉಪಸ್ಥಿತರಿದ್ದರು
ಸ್ಥಳ : ಸೂರ್ನಳ್ಳಿ ರೋಡ್ ಗಾಯತ್ರಿ ಟೆಕ್ಸ್ ಟೈಲ್ಸ್ ಹಿಂಭಾಗ, ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ ಅಡ್ವೋಕೇಟ್ ಬಿಲ್ಡಿಂಗ್ ಕುಂದಾಪುರ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page