ಹೆಮ್ಮಾಡಿ-ತ್ರಾಸಿಯಲ್ಲಿ ಅಂಡರ್ ಪಾಸ್‌ಗೆ ಅನುಮೋದನೆ

ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ಅಪಾಯಕಾರಿ ಜಂಕ್ಷನ್ ತಲ್ಲೂರು,ಹೆಮ್ಮಾಡಿ.ತ್ರಾಸಿ ಹಾಗೂ ಯಡ್ತರೆಯಲ್ಲಿ ಅಂಡರ್‌ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಬೈಂದೂರು ಮತ್ತು ಕುಂದಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಅಂಡರ್‌ಪಾಸ್ ನಿರ್ಮಿಸುವಂತೆ ಡಿಸೆಂಬರ್ ತಿಂಗಳಿನಲ್ಲಿಯೇ ಮನವಿಯನ್ನು ಸಲ್ಲಿಸಲಾಗಿದ್ದು.ಕೇಂದ್ರ ಸಚಿವರು ಮನವಿಯನ್ನು ಪುರಸ್ಕರಿಸಿದ್ದಾರೆ.ಒಟ್ಟು ಆರು ಕಡೆ ಅಂಡರ್‌ಪಾಸ್ ನಿರ್ಮಿಸುವಂತೆ ಮನವಿಯನ್ನು ನೀಡಲಾಗಿದ್ದು ನಾಲ್ಕು ಕಡೆ ಅಡರ್‌ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದೆ ಎಂದು ಅವರು ಹೇಳಿದ್ದಾರೆ.
ಅರಾಟೆ -ಮುಳ್ಳಿಕಟ್ಟೆ ಹಾಗೂ ಶಿರೂರು,ನಿರ್ಗದ್ದೆ ವರೆಗೆ ಸರ್ವಿಸ್ ನಿರ್ಮಾಣ ಹಾಗೂ ಬೀದಿ ದೀಪ ಅಳವಡಿಕೆಗೆ ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.ತಾಂತ್ರಿಕ ಕಾರಣದಿಂದಾಗಿ ಮುಳ್ಳಿಕಟ್ಟೆ ಮತ್ತು ಶಿರೂರು ಬಳಿ ಅಂಡರ್‌ಪಾಸ್ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.