ಬಡಾಕೆರೆ:ಸಮಾಲೋಚನಾ ಸಭೆ ಉದ್ಘಾಟನೆ

Share

Advertisement
Advertisement
Advertisement

ಕುಂದಾಪುರ:ಕಂಬದಕೋಣೆ ಶಿಕ್ಷಣ ಸಂಯೋಜಕ ಕೇಂದ್ರದ ಜುಲೈ ತಿಂಗಳ ಸಮಾಲೋಚನಾ ಸಭೆ ಸ.ಹಿ‌.ಪ್ರಾ.ಶಾಲೆ ಬಡಾಕೆರೆಯಲ್ಲಿ ಶನಿವಾರ ನಡೆಯಿತು.
ಶ್ರೀ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳು ಹಾಗೂ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ವೇದ.ಮೂರ್ತಿ ಲೋಕೇಶ ಅಡಿಗ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ,ಶಿಕ್ಷಣದೊಂದಿಗೆ ಸತ್ಯಶೀಲತೆ,ನ್ಯಾಯ, ಧರ್ಮಾಚರಣೆ,ಸಂಸ್ಕೃತಿಗಳು ಕೂಡಿದಾಗ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ.ಶಿಕ್ಷಕರು ಅಂತಹ ಗುರುತರವಾದ ಜವಾಬ್ದಾರಿಯನ್ನು ವಹಿಸಿದಾಗ ಶಿಕ್ಷಣ ಪರಿಪೂರ್ಣವಾಗುವುದು ಎಂದು ಶುಭ ಹಾರೈಸಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗಾಗಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲುವ ಮಾಹಿತಿಯನ್ನು ಶಿಕ್ಷಕರಿಗೆ ನೀಡಲಾಯಿತು.
ಶಿಕ್ಷಕರಿಗಾಗಿ ನಡೆದ ಸನಾಲೋಚನಾ ಸಭೆಯಲ್ಲಿ ಸರಳ ಪ್ರಯೋಗ ನಡೆಸುವುದರ ಕುರಿತು ಬಿ.ಆರ್‌.ಪಿ.ರಾಮಕೃಷ್ಣ ದೇವಾಡಿಗರು ಶಿಕ್ಷಕರಿಂದ ಚರ್ಚಿಸಿದರು.ಜಯಪ್ರಕಾಶ್ ಶೆಟ್ಟಿ ಅವರು ಗಣಿತ ವಿಷಯದ ಕೆಲವು ಆಧಾರಿತ ಕಲಿಕಾಂಶವನ್ನು ಚಟುವಟಿಕೆ, ಮೋಜಿನ ಲೆಕ್ಕಗಳ ಮೂಲಕ ಆಕರ್ಷಕವಾಗಿ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿ ಸುಮಂಗಲ ಎಫ್.ಎಲ್‌.ಎನ್.ಕುರಿತು ಕ್ರೀಡಾವಿಧಾನದ ಮೂಲಕ ಉತ್ತಮವಾಗಿ ತರಗತಿ ನಡೆಸಿಕೊಟ್ಟರು.ವಿಶ್ವನಾಥ ಪೂಜಾರಿ,ಎಸ್.ಆನಂದ ಮೊಗವೀರ,ಎಸ್.ಡಿ.ಎಮ್. ಸಿ.ಅಧ್ಯಕ್ಷ ಶ್ರೀಧರ ದೇವಾಡಿಗ, ಮಂಜುನಾಥ ದೇವಾಡಿಗ,ರಾಜ ಖಾರ್ವಿ,ಶಾಲಾ ಮುಖ್ಯ ಶಿಕ್ಷಕಿ ರೋಹಿಣಿ,ಮಾಧವ ಅಡಿಗ, ರಶ್ಮಿ,ಸಂಪನ್ಮೂಲ ವ್ಯಕ್ತಿ ಜಯಪ್ರಕಾಶ ಶೆಟ್ಟಿ,ರಾಕೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.ಸಿ.ಆರ್.ಪಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಶಿಕ್ಷಕಿ ರೋಹಿಣಿ ವಂದಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page