ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಶಯದೇವಿಸುತೆ ಮರವಂತೆ ಆಯ್ಕೆ

ಕುಂದಾಪುರ:ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಅವರು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ನೂತನ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ,ಯಕ್ಷಗಾನ ಕ್ಷೇತ್ರದಲ್ಲಿ,ವಿವಿಧ ಪತ್ರಿಕೋದ್ಯಮ ಹಾಗೂ, ಹಲವಾರು ಮಾಧ್ಯಮ ವಾಹಿನಿಗಳಲ್ಲಿ ಸತತ ಸೇವೆಗೈಯ್ಧಿರುವಂತಹ
ಇವರ ಕಲಾಪ್ರತಿಭೆಯ ನಿರಂತರ ಸೇವೆಗೆ ಅಕ್ಕಮಹಾದೇವಿ ಪ್ರಶಸ್ತಿ,ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ,ಮಹಿಳಾ ಸಾಧಕಿ ಪ್ರಶಸ್ತಿ,ರಂಗಸ್ಥಳ ರತ್ನ ಪ್ರಶಸ್ತಿ,ಕುಂದಶ್ರೀ ಪ್ರಶಸ್ತಿ, ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ,ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ,ಸ್ಟೇಟ್ ಲೆವೆಲ್ ಅವಾರ್ಡ್,ಡಾ. ಜಿ.ಡಿ. ಜೋಶಿ ಗೌರವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2023, ಕರುನಾಡ ಕಲಾ ಕೇಸರಿ; ಸಾಹಿತ್ಯ ರತ್ನ ಸಿರಿ ಪ್ರಶಸ್ತಿ ಹಾಗೂ, ಇನ್ನಿತರ ಮಹೋನ್ನತ ಪ್ರಶಸ್ತಿಗಳು ಈಗಾಗಲೇ ಇವರ ಮುಡಿಗೇರಿದ್ದು ಇದೀಗ, ಜಾನಪದ ಕಲೆ ಮತ್ತು ಜನಪದ ಕಲಾವಿದರ ಸಂರಕ್ಷಣೆಯಲ್ಲಿನ
ಪ್ರಮುಖ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.




















































































































































































































































































































































































































































































































































































































































































































































































































































































































































































































































































































































































































































































































































































































































































