ಆಕಸ್ಮಿಕವಾಗಿ ಕರೆಂಟ್ ಶಾಕ್ ತಗುಲಿ ಕಾರ್ಮಿಕ ಸಾವು

ಕುಂದಾಪುರ:ನಾವುಂದ ಮಸ್ಕಿ ಎಂಬಲ್ಲಿ ವಾಹನ ಚೆಸ್ಸಿಗೆ ಪೈಂಟಿಂಗ್ ಹೊಡೆಯುತ್ತಿದ್ದ ಸಮಯದಲ್ಲಿ ಪೈಂಟಿಂಗ್ ಮೆಷಿನ್ ನಿಂದ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಗಾಣದಮಕ್ಕಿ ನಿವಾಸಿ ಕಾರ್ಮಿಕ ಸಂದೀಪ್ ಎನ್ನುವವರು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































































































































































































































































































































































































































































































































































































































































































































































































































































































































































































































































































































































































































































































































































































































