ಸುಂಟರ ಗಾಳಿ ಅಬ್ಬರಕ್ಕೆ ನಲುಗಿದ ಗುಜ್ಜಾಡಿ ಗ್ರಾಮ ಏಳು ಮನೆಗೆ ಹಾನಿ

ಕುಂದಾಪುರ:ಬುಧವಾರ ಬೀಸಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಪಾಡಿ ಶ್ರೀಕೃಷ್ಣ ಕಾರಂತ್ ಎನ್ನುವವರಿಗೆ ಸೇರಿದ ದನದ ಕೊಟ್ಟಿಗೆ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಕೊಟ್ಟಿಗೆ ಒಳಗೆ ಮಲಗಿದ್ದ ಹಸು ದಾರುಣವಾಗಿ ಮೃತಪಟ್ಟಿದ ಘಟನೆ ನಡೆದಿದೆ.ಲಕ್ಷಾಂತರ.ರೂ ನಷ್ಟ ಉಂಟಾಗಿದೆ.
ಸುಂಟರಗಾಳಿ ಅಬ್ಬರಕ್ಕೆ ಗುಜ್ಜಾಡಿ ಗುಜ್ಜಾಡಿ ಜನತಾ ಕಾಲೋನಿ ನಿವಾಸಿ ಶೀನ ಬಿನ್ ವೆಂಕಟ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಭಾಗಶಹ ಹಾನಿ ಉಂಟಾಗಿದ್ದು ಅಂದಾಜು 40, ಸಾವಿರ.ರೂ ನಷ್ಟ ಸಂಭವಿಸಿದೆ.ಭಾರಿ ಗಾಳಿಗೆ ಮುತ್ತು ಅವರ ಮನೆ ತಗಡು ಶೀಟ್ ಹಾರಿ ಹೋಗಿದೆ ಸುಮಾರು 15 ಸಾವಿರ.ರೂ ನಷ್ಟ ಆಗಿದೆ.ಕಂಚುಗೋಡು ಭಾಗದ ನಿವಾಸಿ ಅಕ್ಕಮ್ಮ ಅವರ ದನ ಕೊಟ್ಟಿಗೆಗೆ ಹಾನಿ ಆಗಿದ್ದು 7,500.ರೂ ನಷ್ಟ ಉಂಟಾಗಿದೆ.ಜನತಾ ಕಾಲೋನಿ ನಿವಾಸಿ ಮುಕಾಂಬು ಅವರ ಮನೆ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ಮನೆ ತೀವ್ರ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು ಅಂದಾಜು 80 ಸಾವಿರ.ರೂ ನಷ್ಟ ಸಂಭವಿಸಿದೆ.ಗುಜ್ಜಾಡಿ ಮಾವಿನ ಕಟ್ಟೆ ಬಳಿ ನಿವಾಸಿ ಶ್ರೀಕೃಷ್ಣ ಕಾರಂತ ಅವರ ಮನೆ ಹಾಗೂ ದನದ ಕೊಟ್ಟಿಗೆ ಮೇಲೆ ಹುಣಸೆ ಮರ ಬಿದ್ದ ಪರಿಣಾಮ ತೀವ್ರವಾಗಿ ಹಾನಿ ಉಂಟಾಗಿದ್ದು ಒಂದು ಹಸು ಮೃತಪಟ್ಟಿದೆ ಘಟನೆಯಲ್ಲಿ ಅಂದಾಜು 1.50 ಲಕ್ಷ.ರೂ ನಷ್ಟ ಉಂಟಾಗಿದೆ.