ಮಳೆಹಾನಿಗೆ ತುರ್ತು ಪರಿಹಾರ ಒದಗಿಸಲು ಶಾಸಕರಾದ ಗುರುರಾಜ್ ಗಂಟಿಹೊಳೆ ನಿರ್ದೇಶನ

Share

Advertisement
Advertisement

ಕುಂದಾಪುರ:ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಪೂರೈಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು
ನಿರಂತರ ಮಳೆಯಿಂದ ನೆರೆ, ಪ್ರವಾಹದಿಂದ ಅನೇಕರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ ಹಾಳಾಗಿದೆ. ಇನ್ನು ಕೆಲವು ಭಾಗದಲ್ಲಿ ಕಡಲ್ಕೊರೆತದಿಂದ ತೆಂಗಿನ ಮರಗಳು ಸಹಿತ ಆಸ್ತಿಪಾಸ್ತಿಗೆ ಅಪಾರ ಹಾನಿ ಉಂಟಾಗಿದೆ. ಇದೆಲ್ಲದಕ್ಕೂ ಶೀಘ್ರವೇ ಪರಿಹಾರ ಒದಗಿಸುವ ಕಾರ್ಯ ಆಗಬೇಕು ಎಂದರು.
ಮಳೆಯಿಂದ ಅಪಾರ ಪ್ರಮಾಣದಲ್ಲಿ ಭತ್ತದ ಗದ್ದೆಗಳಿಗೆ ಹಾನಿಯಾಗಿವೆ. ಬೆಳೆ ಹಾನಿಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಪರಿಹಾರ ಒದಿಸುವ ಕಾರ್ಯ ಆಗಬೇಕು. ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಎಷ್ಟು ಭಾಗದಲ್ಲಿ ಹಾನಿಯಾಗಿದೆ ಎಂಬುದನ್ನು ಗುರುತಿಸಿ, ಆದಷ್ಟು ಬೇಗ ರೈತರಿಗೆ, ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಪರಿಹಾರ ವಿಳಂಬ
ಮಳೆಹಾನಿ ಸಹಿತ ಪ್ರಕೃತಿ ವಿಕೋಪದಿಂದ ಆಗುತ್ತಿರುವ ಹಾನಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಬರಲು ವಿಳಂಬ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಕೃತಿ ವಿಕೋಪದಿಂದ ಮನೆಗಳು ಸಂಪೂರ್ಣ ಹಾನಿಯಾದಾಗ 5 ಲಕ್ಷಗಳ ವರೆಗೂ ಪರಿಹಾರ ನೀಡಲಾಗುತಿತ್ತು. ಅದನ್ನು ಈಗ 1.20ಲಕ್ಷಕ್ಕೆ ಸಮೀತಗೊಳಿಸಿದ್ದಾರೆ. ಪರಿಹಾರ ನೀಡುವಾಗ ನಾನಾ ತಾಂತ್ರಿಕ ಸಮಸ್ಯೆ ಹಾಗೂ ಕುಂಟು ನೆಪವೊಡ್ಡುವುದನ್ನು ನಿಲ್ಲಿಸಬೇಕು. ಹಾನಿಗೊಳಗಾದವರ ಸಂಕಷ್ಟ ಅರಿತು ಕೂಡಲೇ ಹೆಚ್ಚಿನ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದರು.
ಎಲ್ಲ ರೀತಿಯಲ್ಲೂ ಸನ್ನದ್ಧರಾಗಿರಬೇಕು
ಮಳೆಗಾಲದಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಬರುತ್ತಿರುತ್ತದೆ. ಎಲ್ಲ ದೂರುಗಳನ್ನು ತಾಳ್ಮೆಯಿಂದ ಸ್ವೀಕರಿಸಬೇಕು ಮತ್ತು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕೇ ವಿನಃ ಅವರೊಂದಿಗೆ ದರ್ಪದಿಂದ ವರ್ತಿಸಬಾರದು. ಹೀಗಾಗಿ ಇಡೀ ತಾಲೂಕು ತಂಡ ಮಳೆಗಾಲದ ಸೇವೆ ಸಜ್ಜಾಗಿರಬೇಕು. ಅಲ್ಲದೆ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಶಾಲಾ ಕಟ್ಟಡಗಳಿಗೆ ಹೆಚ್ಚು ಹಾನಿ
ಕ್ಷೇತ್ರದ ಶಾಲಾ ಕಟ್ಟಡಗಳಿಗೆ ಮಳೆಯಿಂದ ಹೆಚ್ಚಿನ ಹಾನಿಯಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಪ್ರತಿ ಶಾಲೆಯಿಂದ ವರದಿ ಪಡೆಯಬೇಕು ಅಲ್ಲದೆ ಅಗತ್ಯವಿರುವ ಕಡೆಗಳಲ್ಲಿ ತುರ್ತು ಕಟ್ಟಡದ ವ್ಯವಸ್ಥೆ ಅಥವಾ ಬದಲಿ ಕಟ್ಟಡದ ವ್ಯವಸ್ಥೆ ಮಾಡಬೇಕು ಶೈಕ್ಷಣಿಕ ವಿಚಾರದಲ್ಲಿ ಯಾವುದೇ ವಿಳಂಬ ಧೋರಣೆ ಸರಿಯಲ್ಲ ಎಂಬ ನಿರ್ದೇಶನ ನೀಡಿದರು.
ತುರ್ತು ವ್ಯವಸ್ಥೆ ಅಗತ್ಯ
ಬೈಂದೂರು-ದೊಂಬೆ ಮಾರ್ಗದಲ್ಲಿ ಸೋಮೇಶ್ವರ ಸಮೀಪ ಗುಡ್ಡ ಕುಸಿದಿದ್ದು ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ ಎದ್ದು ತೋರುತ್ತದೆ. ಈ ಪರಿಸರದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಅತೀ ಶೀಘ್ರದಲ್ಲೇ ಓಡಾಟದ ರಸ್ತೆ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ತಹಶಿಲ್ದಾರ್ ಪ್ರದೀಪ್,ಇಓ ಭಾರತಿ, ಬಿಇಒ ನಾಗೇಶ್, ಆರ್ ಎಫ್ ಓ ಸಂದೇಶ್, ಎಸ್.ಐ, ತಿಮ್ಮೇಶ್, ಪಟ್ಟಣ ಪಂಚಾಯತಿ ಸಿಒ ಅಜಯ್ ಭಾಸ್ಕರ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page