ಕಡಲ್ಕೊರೆತ ಪ್ರದೇಶಕ್ಕೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

ಕುಂದಾಪುರ:ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಡಲ್ಕೊರೆತ ದಿಂದ ಹಾನಿ ಉಂಟಾಗಿರುವ ಕಂಚುಗೋಡು ಹಾಗೂ ಗುಜ್ಜಾಡಿ ಭಾಗಕ್ಕೆ ಭೇಟಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮುದ್ರ ಅಲೆಗಳ ಆರ್ಭಟದಿಂದ ಉಂಟಾದ ಕಡಲ ತೀರದ ಹಾನಿಗಳ ಕುರಿತು ಸ್ಥಳೀಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದರು. ತುರ್ತು ಪರಿಹಾರ ಕಾರ್ಯ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದರು.
ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ ದೇವಾಡಿಗ, ಸ್ಥಳೀಯರಾದ ಸದಾಶಿವ ಕಂಚಗೋಡು, ರಾಮದಾಸ್, ಸುನಿಲ್, ಸತೀಶ್ ಖಾರ್ವಿ ಮೊದಲಾದರು ಉಪಸ್ಥಿತರಿದ್ದರು.