ನಾಯಕವಾಡಿ ಬಸ್‍ಸ್ಟ್ಯಾಂಡ್‍ನಲ್ಲಿ ಮಲಗಿದ ವ್ಯಕ್ತಿ ಸಾವು

ಗಂಗೊಳ್ಳಿ:ಕುಂದಾಪುರ ತಾಲೂಕಿನ ತ್ರಾಸಿ ಗಂಗೊಳ್ಳಿ ಮುಖ್ಯ ರಸ್ತೆಯ ನಾಯಕವಾಡಿ ಬಸ್ ನಿಲ್ದಾಣದ ಒಳಗೆ ಸುಮಾರು 70 ವರ್ಷ ಕ್ಕೂ ಹೆಚ್ಚಿನ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮಲಗಿದಲ್ಲೆ ಮೃತ ಪಟ್ಟಿದ ಘಟನೆ ಭಾನುವಾರ ನಡೆದಿದೆ.
ಗಂಗೊಳ್ಳಿ ಠಾಣೆಯ ಪಿಎಸ್‍ಐ ಬಸವರಾಜ್ ಕಣಶೆಟ್ಟಿ (ಗುಪ್ತಚರ) ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಪರಿಶೀಲನೆ ನಡೆಸಿದ ಬಳಿಕ ವಾರಿಸುದಾರರನ್ನು ಪತ್ತೆ ಹಚ್ಚಿದ್ದು ಮೃತರು ತಲ್ಲೂರು ಸಮೀಪದ ನಿವಾಸಿ ಗೋವಿಂದ ಪೂಜಾರಿ ಎಂದು ತಿಳಿದು ಬಂದಿದೆ.ಮೃತರ ಮನೆಯವರು ಸ್ಥಳಕ್ಕೆ ಆಗಮಿಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಶವವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.