ಮೊದಲ ಬಾರಿಗೆ ವಿಮಾನ ಏರಲಿರುವ ಕೃಷಿ ಕುಟುಂಬದ ಮಹಿಳೆಯರು:ಎಂಐ ಲೈಫ್ ಸ್ಟೈಲ್ ಕಂಪನಿ ವತಿಯಿಂದ ವಿಮಾನಯಾನ ಭಾಗ್ಯ

ಬೈಂದೂರು:ಶಿಕ್ಷಣವಂತರಾಗಿ ಉದ್ಯೋಗಕ್ಕಾಗಿ ಅಲೆಯುವರನ್ನು ಬಹಳಷ್ಟು ಜನರನ್ನು ನೋಡ ಬಹುದಾಗಿದೆ.ಒಳ್ಳೆ ಕೆಲಸ ಪಡೆದು ಕೈ ತುಂಬಾ ಸಂಬಳ ಗಳಿಸಿ ತಮ್ಮ ಮನದ ಆಸೆಗಳನ್ನು ಪೂರೈಸಿ ಕೊಳ್ಳುವ ಮಹದಾಸೆ ಎಲ್ಲರಿಗೂ ಇದ್ದೇ ಇರುತ್ತದೆ.ದುಬಾರಿ ದುನಿಯಾದಲ್ಲಿ ಕನಸುಗಳನ್ನು ನನಸು ಮಾಡಿಕೊಳ್ಳುವುದು ತುಂಬಾನೇ ಕಷ್ಟ.
ಇದಕ್ಕೆ ಅಪವಾದ ಎನ್ನುವಂತೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಸಾಮಾನ್ಯ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ದೊಂದಿಗೆ ಅವಕಾಶವನ್ನು ಬಳಸಿಕೊಂಡು ಎಂಐ ಲೈಫ್ ಸ್ಟೈಲ್ ಎನ್ನುವ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಇಳಿದ ಶ್ರೀಮತಿ ಪೂಜಾರಿ,ಅಶ್ವಿನಿ ರಾಘವೇಂದ್ರ,ಯಶೋದ ಖಾರ್ವಿ ಅವರು ತಾವು ಮಾಡುವ ಕೆಲಸದ ಮೇಲೆ ಶೃದ್ಧೆ ಇಟ್ಟು ಅಲ್ಪ ಅವಧಿಯಲ್ಲೇ ತಾವು ಇಟ್ಟ ಹೆಜ್ಜೆಯಲ್ಲಿ
ಸಫಲತೆಯನ್ನು ಗಳಿಸುವುದರ ಮುಖೇನ ಎಂಐ ಲೈಫ್ ಸ್ಟೈಲ್ ಕಂಪೆನಿ ವತಿಯಿಂದ ಐದು ದಿನಗಳ ವಿದೇಶ ಪ್ರವಾಸವನ್ನು ಕೈ ಗೊಳ್ಳಲಿದ್ದಾರೆ.
ಸಾಧನೆ ಎನ್ನುವುದು ಸಾಧಕನ ಸ್ವತ್ತು ಹೊರತು ಸೊಮೇರಿಗಳ ಸ್ವತ್ತು ಅಲ್ಲ ಎನ್ನುವುದನ್ನು ತಮ್ಮ ಸಾಧನೆಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಎಂಐ ಲೈಫ್ ಸ್ಟೈಲ್ ಕಂಪೆನಿ ಗ್ರಾಮೀಣ ಭಾಗದ ಹಲವಾರು ಜನರಿಗೆ ಸುಂದರ ಜೀವವನ್ನು ಸಾಗಿಸಲು ಅವಕಾಶವನ್ನು ಮಾಡಿಕೊಟ್ಟಿದ್ದು.ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಜೀವನ ಸುಖ ಸಂತೋಷದಿಂದ ಸಾಗುತ್ತಿದೆ.
ಎಂಐ ಲೈಫ್ ಸ್ಟೈಲ್ ಸತೀಶ ಪೂಜಾರಿ ಮಾತನಾಡಿ,ಎಂಐ ಲೈಫ್ ಸ್ಟೈಲ್ ಕಂಪೆನಿ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.