ರಜೆ ಘೋಷಣೆ ಸಂದರ್ಭ ಸಮನ್ವಯ ಅಗತ್ಯ:ಶಾಸಕ ಗುರುರಾಜ್ ಗಂಟಿಹೊಳೆ
ಬೈಂದೂರು:ಮಳೆ,ನೆರೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕಾಗುತ್ತದೆ. ಇಲ್ಲವಾದರೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
ಬೈಂದೂರು ಮತ್ತು ಕುಂದಾಪುರ ಅವಳಿ ತಾಲೂಕುಗಳಿದ್ದಂತೆ ಇಡೀ ತಾಲೂಕಿಗೆ ರಜೆ ನೀಡುವ ಸಂದರ್ಭದಲ್ಲಿ ಎರಡು ಕಡೆ ಅನ್ವಯಿಸುವಂತೆ ಮಾಡಬೇಕು. ಬೈಂದೂರು ಭಾಗದ ಅನೇಕ ವಿದ್ಯಾರ್ಥಿಗಳು,ಶಿಕ್ಷಕರು ಕುಂದಾಪುರ ಭಾಗಕ್ಕೆ ಹೋಗುತ್ತಾರೆ, ಕುಂದಾಪುರದಿಂದ ಈ ಭಾಗಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆದರೆ ಶಿಕ್ಷಕರು, ಉಪನ್ಯಾಸಕರು ಹೆಚ್ಚಿದ್ದಾರೆ. ಹೀಗಾಗಿ ಬೈಂದೂರಿಗೆ ರಜೆ ನೀಡಿದಾಗ ಕುಂದಾಪುರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ.ಆದ್ದರಿಂದ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ತಾಹಶೀಲ್ದಾರರು,ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡೇ ರಜೆ ನೀಡುವಂತಾಗಬೇಕು. ಇಲ್ಲವಾದರೆ ಅನವಶ್ಯಕ ಗೊಂದಲ ಸೃಷ್ಟಿಯಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂಬ ಸಲಹೆಯನ್ನು ಅಧಿಕಾರಿಗಳಿಗೆ ಶಾಸಕರು ನೀಡಿದ್ದಾರೆ.