ಕುರು ದ್ವೀಪ ಪ್ರದೇಶ ಆವರಿಸಿದ ನೆರೆ

ಬೈಂದೂರು:ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ದ್ವೀಪದಲ್ಲಿ ಮಂಗಳವಾರ ಮತ್ತೆ ನೆರೆ ಕಾಣಿಸಿಕೊಂಡಿದ್ದು.ಕೆಂಪು ಓಕುಳಿ ನೆರೆ ನೀರು ಕುರು ದ್ವೀಪ ಪ್ರದೇಶವನ್ನು ಆವರಿಸಿದೆ.
ಕಳೆದ ಒಂದು ವಾರಗಳ ಹಿಂದೆ ಕಾಣಿಸಿ ಕೊಂಡಿದ್ದ ನೆರೆ ಸೋಮವಾರ ಸುರಿದ ಭಾರಿ ಮಳೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಮಂಗಳವಾರ ಎರಡನೇ ಬಾರಿಗೆ ನೆರೆ ನೀರು ಕುರು ದ್ವೀಪ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆ ಆದರೆ ದ್ವೀಪ ವಾಸಿಗಳಿಗೆ ಸಂಕಷ್ಟ ಎದುರಾಗಲಿದೆ.