ಹೊಸಾಡು:ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ

ಕುಂದಾಪುರ:ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಾಳುಮನೆ ಕಾಳಮ್ಮ ಎಂಬುವವರ ಮನೆ ಮಾಡಿನ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಸೀಟ್,ಪಕಾಸಿ,ಹೆಂಚು,ಡಿಟಿಎಚ್ ತುಂಡಾಗಿದೆ.ಘಟನೆಯಲಿ ಅಂದಾಜು 15 ಸಾವಿರ.ರೂ ನಷ್ಟ ಉಂಟಾಗಿದೆ.ಹೊಸಾಡು ವಿ.ಎ ಮತ್ತು ಉಗ್ರಾಣಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು