ಸೌಪರ್ಣಿಕಾ ನದಿ ತೀರ ಜಲಾವೃತ,ಸಂತೃಸ್ಥರ ಗೋಳು ಕೇಳುವವರೆ ಇಲ್ಲಾ

Share

ಕುಂದಾಪುರ;ಕಳದೆರಡು ದಿನಗಳಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ಸೌಪರ್ಣಿಕಾ ನದಿ ಉಕ್ಕಿ ಹರಿದ ಪರಿಣಾಮ ನಾವುಂದ ಸಾಲ್ಬುಡ,ಬಡಾಕೆರೆ,ಮರವಂತೆ,ಕುರು ದ್ವೀಪ,ಪಡುಕೋಣೆ ಭಾಗದಲ್ಲಿ ರಾತ್ರೋರಾತ್ರಿ ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ್ದು ಅವಾಂತರ ಸೃಷ್ಟಿ ಉಂಟು ಮಾಡಿದೆ.ನೆರೆ ನೀರು ಮನೆ ಬಾಗಿಲಿಗೆ ನುಗ್ಗಿದ ಪರಿಣಾಮ ನೂರಾರು ಕುಟುಂಬಗಳು ತೊಂದರೆಗೆ ಸಿಲುಕಿ ಕೊಂಡಿದ್ದಾರೆ.
ಒಂದು ವಾರದ ಹಿಂದೆ ನೆರೆ ಯಿಂದ ಸಂಕಷ್ಟವನ್ನು ಅನುಭವಿಸಿದ ನೆರೆ ಪೀಡಿತ ಪ್ರದೇಶದ ಜನರು ಮಂಗಳವಾರ ಮತ್ತೆ ಕಾಣಿಸಿಕೊಂಡಿದ್ದ ನೆರೆ ನೀರಿ ನಿಂದ ತೊಂದರೆ ಪಡುವಂತಾಯಿತು.ನಾವುಂದ ಸಾಲ್ಬುಡ ಪ್ರದೇಶಕ್ಕೆ ನೆರೆ ನೀರು ಒಮ್ಮೆ ನುಗ್ಗಿದರೆ ಸಂಪೂರ್ಣ ಇಳಿಮುಖಗೊಳ್ಳಲು ಮೂರನಾಲ್ಕು ದಿನಗಳೆ ಬೇಕಾಗುತ್ತದೆ.ನಿರಂತರವಾಗಿ ನೆರೆ ನೀರು ಮನೆ ಬಾಗಿಲನ್ನು ಆವರಿಸಿ ನಿಂತು ಕೊಳ್ಳುವುದರಿಂದ ಜನರು ಅನ್ನಹಾರ ಸಹಿತ ಕುಡಿಯುವ ನೀರಿಗೂ ಕಷ್ಟ ಪಡುವಂತಹ ಪರಿಸ್ಥಿತಿ ತಲೆ ದೊರುತ್ತದೆ.ನೆರೆ ನೀರಿ ನಿಂದ ಸಂಕಷ್ಟವನ್ನು ಅನುಭವಿಸುವ ಸಂತೃಸ್ಥರಿಗೆ ಕನಿಷ್ಠ ಪಕ್ಷ ಆಹಾರ ಸಾಮಾಗ್ರಿಗಳ ಕಿಟ್,ಶುದ್ಧ ಕುಡಿಯುವ ನೀರಿನ ಅನುಕೂಲವನ್ನು ಮಾಡಿ ಕೊಡಲು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.ನೆರೆ ಪೀಡಿತ ಜನರ ಗೋಳನ್ನು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಜನರು ದೂರಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page