ಮಳೆ ಅಬ್ಬರ,ಶಾಲೆ ದೇವಳ ಕೃಷಿ ಗದ್ದೆಗಳಿಗೆ ನುಗ್ಗಿದ ನೀರು

ಸಿದ್ದಾಪುರ:ಕಳೆದೆರೆಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣದ ಅಮಾಸೆಬೈಲ್ ಸಿದ್ದಾಪುರ ಹಳ್ಳಿಹೊಳೆ ಆಜ್ರಿ ಶಂಕರನಾರಾಯಣ ಅಂಪಾರು ಹೊಸಂಗಡಿ ಮುಂತಾದ ಕಡೆ ಮಳೆ ಅಬ್ಬರಕ್ಕೆ ಹಲವಾರು ವಿದ್ಯುತ್ ಕಂಬಗಳು ಬೃಹತಾಕಾರಾದ ಮರಗಳು ಧರೆಗುರುಳಿದ್ದು ಜನಸಂಚಾರಕ್ಕೆ ಅಡ್ಡಿಯಾಗಿದ್ದು ಸುತ್ತುವರಿದ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಘಾಟ್ ಪ್ರದೇಶದಿಂದ ಬಾರಿ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದು ನದಿ ಹಳ್ಳ ತೋಡುಗಳು ತುಂಬಿ ಹರಿದಿದ್ದು ಗದ್ದೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ ಇತ್ತಿಚೆಗೆ ಬಿತ್ತನೆ ಮಾಡಿದ ಭತ್ತ ಕೃಷಿಗಳು ಸಂಪೂರ್ಣ ಮಳೆ ಪಾಲಾಗಿವೆ.ಮನೆ ದೇವಸ್ಥಾನ ತೋಟಗಳಿಗೆ ನೀರು ನುಗ್ಗಿದ್ದು ಜನತೆ ಮಳೆಯಿಂದ ಹೈರಾಣಾಗಿದ್ದಾರೆ.
ಶಾಲೆಗೆ ನುಗ್ಗಿದ ಮಳೆ ನೀರು:ಶಂಕರನಾರಾಯಣ ಕುಳ್ಳುಂಜೆ ಸರಕಾರಿ ಶಾಲೆಗೆ ಭಾರಿ ಮಟ್ಟದಲ್ಲಿ ಅರಣ್ಯ ಪ್ರದೇಶದಿಂದ ಹರಿದ ಬಂದ ನೀರು ವಾರಾಹಿ ಚಾನೆಲ್ ಬೈಪಾಸ್ ಮೂಲಕ ಶಾಲಾ ಮುಂಭಾಗದಲ್ಲಿ ಹರಿದು ಬಂದ ನೀರು ನೇರವಾಗಿ ಶಾಲಾ ತರಗತಿ ಕೊಠಡಿಗಳಿಗೆ ನುಗ್ಗಿದೆ.ಅಕ್ಷರ ದಾಸೋಹ ಕಟ್ಟಡ ಬೀಳುವ ಹಂತದಲ್ಲಿದ್ದು ರಭಸದ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ಸನಿಹದಲ್ಲೆ ರಾಜ್ಯ ಹೆದ್ದಾರಿ ರಸ್ತೆಯಿದ್ದು ಶಾಲಾ ಆವರಣ ಗೋಡೆ ಕುಸಿಯುವ ಹಂತದಲ್ಲಿದೆ.ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಈ ಬಗ್ಗೆ ಸಂಭಂದಿತರು ಗಮನಹರಿಸಬೇಕೆಂದು ಶಾಲಾ ಸಮಿತಿ ಅಧ್ಯಕ್ಷ ಗಜೇಂದ್ರ ಮಿತ್ಯಂತ ಹೇಳಿದ್ದಾರೆ.