ಶೃಂಗೇರಿ:ಗುರುನಮನ ಕಾರ್ಯಕ್ರಮ,ವಿದ್ವಾಂಸರಿಗೆ ಸನ್ಮಾನ

ಕುಂದಾಪುರ:ವೇದಾಭಿಮಾನಿಗಳು ಘನಪಾಠಿ ಲಕ್ಷ್ಮೀನಾರಾಯಣ ಭಟ್ ಅವರ ನೇತೃತ್ವದಲ್ಲಿ ಶೃಂಗೇರಿ ಶ್ರೀಮದ್ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಗುರುನಮನ ಕಾರ್ಯಕ್ರಮ ಶ್ರೀವಿಧುಶೇಖರ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಶೃಂಗೇರಿಯಲ್ಲಿ ನಡೆಯಿತು.
ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಅಗ್ನಿಹೋತ್ರಿ ವಾಸುದೇವ ಜೋಗಳೇಕರ್ ಗೋಕರ್ಣ (ಋಗ್ವೇದ),ಅಗ್ನಿಹೋತ್ರಿ ನರಸಿಂಹ ಭಟ್ ಉಮ್ಮಚಗಿ (ಯಜುರ್ವೇದ) ಹಾಗೂ ರಾಮಮೂರ್ತಿ ಶ್ರೌತಿಗಳು ವಿದ್ಯಾರಣ್ಯಪುರ ಶೃಂಗೇರಿ (ಸಾಮವೇದ) ಅವರಿಗೆ ಫಲಪುಷ್ಪ ಸಹಿತ 4.50 ಲಕ್ಷ.ರೂ ನಗದು ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಶ್ರೀ ಗಣೇಶ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಉಪಸ್ಥಿತರಿದ್ದರು.