ಜಲಜೀವನ್ ಹೊಂಡಕ್ಕೆ ಉರುಳಿದ ಸರಕಾರಿ ಬಸ್

ಉಡುಪಿ:ಕುಂದಾಪುರ ದಿಂದ ಗಂಗೊಳ್ಳಿಗೆ ಸಾಗುತ್ತಿದ್ದ ಸರಕಾರಿ ಬಸ್ ಗುಜ್ಜಾಡಿ ಮುಖ್ಯ ರಸ್ತೆಯಲ್ಲಿ ಬೇರೊಂದು ಗಾಡಿಗೆ ಸೈಡ್ ಕೊಡುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಜಲ ಜೀವನ್ ಮೆಷಿನ್ ನೀರಿನ ಪೈಪ್ ಲೈನ್ ಹೊಂಡದಲ್ಲಿ ಸಿಲುಕಿದ ಘಟನೆ ಶನಿವಾರ ನಡೆದಿದೆ.ಕ್ರೈನ್ ಸಹಾಯದಿಂದ ಹೊಂಡದಲ್ಲಿ ಸಿಲುಕಿದ ಬಸ್ನ್ನು ಮೇಲಕ್ಕೆ ಎತ್ತಲಾಯಿತು.ಮುಳ್ಳಿಕಟ್ಟೆ ಗುಜ್ಜಾಡಿ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಜಲಜೀವನ್ ನೀರಿನ ಪೈಪ್ ಲೈನ್ ಹೊಂಡ ಅಪಾಯವನ್ನು ತಂದೊಡ್ಡುತ್ತಿದ್ದು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






















































































































































































































































































































































































































































































































































































































































































































































































































































































































































































































































































































































































































































































































































































































































































