ಮನೆ ಮೇಲೆ ಮರ ಬಿದ್ದು ಹಾನಿ:ವಿಪತ್ತು ನಿರ್ವಹಣಾ ತಂಡದಿಂದ ತೆರವು

ಕುಂದಾಪುರ:ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಜನತಾ ಕಾಲೋನಿಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಗಂಗೆ ದೇವಾಡಿಗ ಹಾಗೂ ರಾಘವೇಂದ್ರ ಭಂಡಾರಿ ಅವರ ಮನೆಗೂ ಹಾನಿ ಉಂಟಾಗಿದೆ.ರಸ್ತೆ ಸಂಚಾರಕ್ಕೂ ತೊಡಕು ಉಂಟಾಗಿತ್ತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ತಂಡ ಪಡುಕೋಣೆ-ನಾಡ ವಲಯದ ಸದಸ್ಯರು ಕ್ಷೀಪ್ರಗತಿಯಲ್ಲಿ ಮರವನ್ನು ತೆರವುಗೊಳಿಸಿದರು.