ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ.
ಹೆಮ್ಮಾಡಿ:ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ,ಸಹೋದರಿ ನಿವೇದಿತಾ ಪ್ರತಿಷ್ಠಾನ ಉಡುಪಿ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅವರ ಜಂಟಿ ಆಶ್ರಯದಲ್ಲಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗಲಕ್ಷ್ಮಿ ಬೆಂಗಳೂರು ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ,ಎಲ್ಲರಲ್ಲಿಯೂ ಒಂದು ವಿಶೇಷ ಕೌಶಲ್ಯ ಇರುತ್ತದೆ,ಇಂದಿನ ಜೀವನದಲ್ಲಿ ಶಿಕ್ಷಣದ ಜೊತೆ-ಜೊತೆಗೆ ಕೌಶಲ್ಯವನ್ನೂ ವೃದ್ಧಿಸಿಕೊಳ್ಳುವುದು ಬಹಳ ಪ್ರಮುಖವಾದದ್ದು,ವಿದ್ಯಾರ್ಥಿ ಜೀವನದಲ್ಲಿ ಪಡೆದ ಅನುಭವ ನಿಮ್ಮ ಜೀವನದ ಬದುಕಿನ ಅಡಿಪಾಯವಾಗಬೇಕು ಎಂದು ಹೇಳಿದರು.ರೋಟರಿ ರಿವರ್ ಸೈಡ್ ಕುಂದಾಪುರ ಅಧ್ಯಕ್ಷ ಡಾ|ವಿಶ್ರಾಂತ್ ಎನ್ ಶೆಟ್ಟಿ,ರೋಟರಿ ಕಾರ್ಯದರ್ಶಿ ರೊನಾಲ್ಡ್ ಡಿ ಮೆಲ್ಲೊ,ನಿಕಟಪೂರ್ವ ಅಧ್ಯಕ್ಷ ಕೌಶಿಕ್ ಯಡಿಯಾಳ,ಸಹೋದರಿ ನಿವೇದಿತಾ ಪ್ರತಿಷ್ಠಾನದ ಬಳಗದವರು ಹಾಗೂ ಜನತಾ ಕಾಲೇಜಿನ ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































