ತ್ರಾಸಿ:ಧನುಷ್ ಟವರ್ಸ್ ಹೊಟೇಲ್ ಪಿಜಿಬಿ,ಬೀಚ್ ರೆಸಿಡೆನ್ಸಿ ಬೋಡಿರ್ಂಗ್,ಲಾಡ್ಡಿಂಗ್ ಉದ್ಘಾಟನೆ





ಕುಂದಾಪುರ:ತ್ರಾಸಿ ರಾ.ಹೆದ್ದಾರಿ 66ರಲ್ಲಿ ನೂತನವಾಗಿ ನಿರ್ಮಾಣಗೊಂಡ ಧನುಷ್ ಟವರ್ ಹೊಟೇಲ್ ಪಿಜಿಬಿ,ಬೀಚ್ ರೆಸಿಡೆನ್ಸಿ ಬೋಡಿರ್ಂಗ್, ಲಾಡ್ಡಿಂಗ್ ಇದರ ಪ್ರವೇಶೋತ್ಸವ ಹಾಗೂ ಉದ್ಘಾಟನಾ ಕಾರ್ಯಕ್ರಮ ಜು.12ರಂದು ಶುಕ್ರವಾರ ಅದ್ದೂರಿಯಾಗಿ ನಡೆಯಿತು.ಬೆಳಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಜರಗಿತು.
ಧನುಷ್ ಟವರ್ಸ್ ಹೊಟೇಲ್ ಪಿಜಿಬಿ,ಬೀಚ್ ರೆಸಿಡೆನ್ಸಿ ಬೋಡಿರ್ಂಗ್,ಲಾಡ್ಡಿಂಗ್‍ನಲ್ಲಿ ಎಸಿ ನಾನ್ ಎಸಿ ಮಲ್ಟಿಕುಶನ್,
ನಾನ್‍ವೆಜ್,ವೆಜ್ ರೆಸ್ಟೋರೆಂಟ್,ಎಸಿ ನಾನ್ ಎಸಿ ರೂಮ್,ಪಾರ್ಟಿ ಹಾಲ್,ಲಿಫ್ಟ್ ವ್ಯವಸ್ಥೆ,ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.
ಶಿವಮೊಗ್ಗ ಹೋಟೆಲ್ ಶ್ರೀರಾಮ ರೆಸಿಡೆನ್ಸಿ ಮಾಲೀಕ ಹಾಗು ಶಿವಮೊಗ್ಗ ಮಾನಸ ಇಂಟರ್ ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಎಚ್. ಸುಬ್ಬಯ್ಯ ಉದ್ಘಾಟಿಸಿ ಮಾತನಾಡಿ,ತ್ರಾಸಿ ಬೀಚ್ ಸನೀಹ ಹೋಟೆಲ್,ಲಾಡ್ಜಿಂಗ್ ಉದ್ಯಮದಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಉದ್ಯೋಗ ಅವಕಾಶಕ್ಕೆ ಸಹಾಯಕವಾಗುತ್ತದೆ ಎಂದು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಧನುಷ್ ಟವರ್ಸ್ ಹೋಟೆಲ್ ಪಿಜಿಪಿ ಬೀಚ್ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಮಾಲೀಕರಾದ ದಾಕ್ಷಾಯಿಣಿ ಪರಮೇಶ್ವರ ಗಾಣಿಗ ಬಿ ಮಾತನಾಡಿ,ಪ್ರವಾಸೋದ್ಯಮ ಚಟುವಟಿಕೆ ಪ್ರೇರಣೆ ನೀಡುವ ದೃಷ್ಟಿ ಕೋನದಿಂದ ಇವೊಂದು ಉದ್ಯಮವನ್ನು ಆರಂಭಿಸಲಾಗಿದ್ದು.ಪ್ರವಾಸಿಗರಿಗೆ ಉತ್ತಮವಾದ ರೀತಿಯ ಸೇವೆಯನ್ನು ಮೌಲ್ಯವರ್ಧಿತ ದರದಲ್ಲಿ ನೀಡಲಾಗುತ್ತದೆ.ಪ್ರವಾಸಿಗರು ಮತ್ತು ಸ್ಥಳೀಯ ಗ್ರಾಹಕರು ನಮ್ಮ ಸಂಸ್ಥೆಗೆ ಭೇಟಿ ನೀಡಿ ಬೆಂಬಲವನ್ನು ನೀಡಬೇಕೆಂದು ವಿನಂತಿಸಿಕೊಂಡರು.
ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ ಎಂ.ಡಿ.ಬಿಜೂರು ಅಧ್ಯಕ್ಷತೆ ವಹಿಸಿ ಮಾತನಾಡಿ,ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಸುಸಜ್ಜಿತವಾದ ಬಹು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದರಿಂದ ಉದ್ಯೋಗವಕಾಶದ ಜತಡಗೆ ಊರಿನ ಅಭವೃದ್ಧಿಗೂ ಸಹಕಾರಿ ಆಗಲಿದೆ.ವಿಶ್ವ ಮಾನ್ಯತೆ ಪಡೆದಿರುವ ತ್ರಾಸಿ ಮರವಂತೆ ಬೀಚ್ ಪ್ರವಾಸೋದ್ಯಮಕ್ಕೆ ಉತ್ತಮವಾದ ಅವಕಾಶಗಳಿದ್ದು.ಇಲ್ಲಿ ಆರಂಭಿಸಿರುವ ನವ ಉದ್ಯಮ ಯಶಸ್ಸು ಕಾಣಲಿದೆ ಎಂದು ಹೇಳಿದರು.
ಧನುಷ್ ಟವರ್ಸ್ ಅಭಿನಂದನ.ಪಿ ಗಾಣಿಗ ಮಾತನಾಡಿ,ತ್ರಾಸಿ-ಮರವಂತೆ ಬೀಚ್ ವಿಶ್ವಮಾನ್ಯತೆ ಪಡೆದುಕೊಂಡಿದೆ.ಬೀಚ್ ನೋಡಲು ಸಾವಿರಾರು ಜನರು ದಿನಂಪ್ರತಿ ಭೇಟಿ ನೀಡುತ್ತಾರೆ.ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ಉತ್ತಮವಾದ ಸೇವೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಇವೊಂದು ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.
ಹೋಟೆಲ್ ಪಿಜಿಪಿ ಬೀಚ್ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಪಾಲುದಾರರಾದ ದಯಾನಂದ ಶ್ರೀಯಾನ್ ಮಾತನಾಡಿ,ಹಲವಾರು ವರ್ಷಗಳಿಂದ ಮುಂಬೈನಲ್ಲಿ ಉದ್ಯಮವನ್ನು ಆರಂಭಿಸಿಕೊಂಡು ಬರಲಾಗುತ್ತಿದ್ದು.ಊರಿನಲ್ಲಿ ಉದ್ಯಮವನ್ನು ಆರಂಭಿಸಬೇಕು ಎನ್ನುವ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಕುಂದಾಪುರ ಶ್ರೀ ವೇಣುಗೋಪಾಲಕ್ರಷ್ಣ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ,ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ರಿ. ಬಾರ್ಕೂರು ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಡಪಾಡಿ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ರಿ. ಅಧ್ಯಕ್ಷ ಸತೀಶ್ ಗಾಣಿಗ ಕುಂದಾಪುರ, ಉದ್ಯಮಿ ಮಧುಕರ ಪೂಜಾರಿ, ಕನ್ಸ್ ಲ್ಟಿಂಗ್ ಸಿವಿಲ್ ಇಂಜಿನಿಯರ್ ಕುಂದಾಪುರ ದಿನೇಶ್ ಹೆಗ್ಡೆ, ಶಾಲಿನಿ ಎ.ಗಾಣಿಗ, ಅಭಿನಂದನ ಪಿ.ಗಾಣಿಗ, ಮಾಸ್ಟರ್ ಧನುಷ್ ಎ. ಗಾಣಿಗ, ದಾಕ್ಷಾಯಿಣಿ,ಹೋಟೆಲ್ ಪಿಜಿಪಿ ಬೀಚ್ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಪಾಲುದಾರರಾದ ಕುಶಲ ಶೆಟ್ಟಿ,ಮಹೇಶ್ ಪೂಜಾರಿ,ಮಧುಕರ ಪೂಜಾರಿ,ನಾಗರಾಜ ದೇವಾಡಿಗ ಉಪಸ್ಥಿತರಿದ್ದರು.
ತ್ರಾಸಿ ಧನುಷ್ – ಟವರ್ ಹೊಟೇಲ್ ಪಿಜಿಬಿ,ಬೀಚ್ ರೆಸಿಡೆನ್ಸಿ ಬೋಡಿರ್ಂಗ್,ಲಾಡ್ಡಿಂಗ್ ಇದರ ಮಾಲಕ ಪರಮೇಶ್ವರ ಗಾಣಿಗ ಬಿ. ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ಬಿಜಾಡಿ ನಿರೂಪಿಸಿದರು.ಉಪ್ಪುಂದ ಸುಬ್ರಹ್ಮಣ್ಯ ಜಿ. ಗಾಣಿಗ ವಂದಿಸಿದರು.