ನೆರೆ ಬಾಧಿತ ಪ್ರದೇಶದ ದನಕರುಗಳಿಗೆ ಔಷಧ ವಿತರಣೆ

ಕುಂದಾಪುರ:ನೆರೆ ನೀರಿನಿಂದ ಜಲಾವೃತ್ತವಾಗಿರುವ ಬೈಂದೂರು ತಾಲೂಕಿನ ನಾವುಂದ ಸಾಲ್ಬುಡ ಪ್ರದೇಶಕ್ಕೆ ಬೈಂದೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ ಖಾರ್ವಿ ಮರವಂತೆ ಮತ್ತು ಸಿಬ್ಬಂದಿಗಳು ದೋಣಿಯಲ್ಲಿ ತೆರಳಿ ದನಕರುಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಗಳನ್ನು ಶುಕ್ರವಾರ ವಿತರಿಸಿದರು.ಸ್ಥಳೀಯರಾದ ನಾಗರಾಜ ನಾವುಂದ ಸಹರಿಸಿದರು.