ನೆರೆ ಪೀಡಿತ ಪ್ರದೇಶದ ಜನರಿಗೆ ಸಮೃದ್ಧ ಜನಸೇವಾ ಟ್ರಸ್ಟ್ ನಿಂದ ಊಟ ವಿತರಣೆ

Share

Advertisement
Advertisement

ಬೈಂದೂರು:ನಿರಂತರ ಸುರಿದ ಮಳೆಯಿಂದಾಗಿ ನಾವುಂದ ಬಡಾಕೆರೆ ಸಾಲ್ಬುಡ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು 80ಕ್ಕೂ ಅಧಿಕ ಮನೆಗಳಿಗೆ ಜಲದಿಗ್ಬಂದನಕ್ಕೆ ಒಳಗಾಗಿದ್ದವು.ಜನರ ಕಷ್ಟವನ್ನು ಅರಿತ ಸಮೃದ್ಧ ಜನಾ ಸೇವಾ ಟ್ರಸ್ಟ್ ಬೈಂದೂರು ವತಿಯಿಂದ ಊಟದ ಪ್ಯಾಕೆಟ್ ಮತ್ತು ನೀರಿನ ಬಾಟಲಿಗಳನ್ನು ದೋಣಿಯಲ್ಲಿ ತೆರಳಿ ವಿತರಿಸಲಾಯಿತು.ಟ್ರಸ್ಟ್ ನ ಐವತ್ತಕ್ಕೂ ಹೆಚ್ಚಿನ ಸದಸ್ಯರು ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದರು.
ತುರ್ತು ಕಾರ್ಯದ ನಿಮಿತ್ತ ಬೆಂಗಳೂರು ಪ್ರವಾಸದಲ್ಲಿದ್ದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರೆ ಭೀತಿಯ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಆಡಳಿತ ಯಂತ್ರ ಚುರುಕುಗೊಳಿಸುವಂತೆ ನೋಡಿಕೊಂಡಿದ್ದಾರೆ.ಶಾಸಕರ ಸೂಚನೆ ಮೇರೆಗೆ ಸಮೃದ್ಧ ಜನಾ ಸೇವಾ ಟ್ರಸ್ಟ್ ವತಿಯಿಂದ ನೆರೆ ಪೀಡಿತ ಪ್ರದೇಶದ ಜನರಿಗೆ ಊಟವನ್ನು ವಿತರಿಸಲಾಗಿದೆ.
ಅಧಿಕಾರಿಗಳು,ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದರು.
ಈ ಸಂದರ್ಭದಲ್ಲಿ ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಉದ್ಯಮಿ ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ,ಮಂಡಲ ಕಾರ್ಯದರ್ಶಿ ಪ್ರಸಾದ್ ಪಿ. ಬೈಂದೂರು ಸೇಹಿತ ಅನೇಕರು ಭೇಟಿ ನೀಡಿ, ಪರಿಹಾರ ಕಾರ್ಯ ಸಹಕರಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page