#ಕುಂದಾಪುರ #ಪ್ರಮುಖ

ಕ್ಲೋರೋಫಾರ್ಮ್ ಬಳಸಿ ಹಗಲುದರೊಡೆಗೆ ಯತ್ನ, ಮೂವರು ಆರೋಪಿಗಳು ಪರಾರಿ

Share

Advertisement
Advertisement

ಮಂಗಳೂರು:ಬಜಪೆ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸೊಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೆ ಸುಮಾರು 4:30ರ ವೇಳೆಗೆ ಆಕ್ಟೀವ(ಸ್ಕೂಟಿ)ದಲ್ಲಿ ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ನ ಒಳಗೆ ಏಕಾಏಕಿ ನುಗ್ಗಿ ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್ ಗೆ ಬಲಾತ್ಕಾರವಾಗಿ ಕೈ ಹಾಕಲು ಪ್ರಯತ್ನಿಸಿದ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ ನ ಇಬ್ಬರು ಸಿಬ್ಬಂದಿಗಳನ್ನು ದೂಡಿ ಹಾಕಿದಾಗ ಸಿಬ್ಬಂದಿಗಳು ಜೋರಾಗಿ ಕಿರುಚಿದ ಕಾರಣದಿಂದಾಗಿ ಆರೋಪಿಗಳು ಪ್ರಯತ್ನ ಕೈಬಿಟ್ಟು ಪರಾರಿಯಾಗಿದ್ದಾರೆ. ಮೂವರು ಆರೋಪಿಗಳ ಪೈಕಿ ಓರ್ವ ಹೆಲ್ಮೆಟ್ ಧಾರಿ ಸ್ಕೂಟರನ್ನು ಸ್ಟಾರ್ಟಿಂಗ್ ನಲ್ಲಿಯೇ ಕಾಯುತ್ತಿದ್ದು ಇಬ್ಬರ ಪೈಕಿ ಓರ್ವ ಬುರ್ಖಾಧಾರಿಯಾಗಿದ್ದು ಸವಾರನ ಹಿಂಬದಿಯಲ್ಲಿ (ಮಧ್ಯದಲ್ಲಿ) ಕುಳಿತು ಹೋದ ಚಲನವಲನಗಳನ್ನು ಪ್ರತ್ಯಕ್ಷದರ್ಶಿಯಾಗಿ ಹಾಗೂ ಸಿಸಿ ಕ್ಯಾಮರಾದ ದೃಶ್ಯಗಳನ್ನು ಗಮನಿಸಿ ಬುರ್ಖಾಧಾರಿ ವ್ಯಕ್ತಿ ಮಹಿಳೆಯಲ್ಲ ಗಂಡಸು ಎಂದು ಶಂಕಿಸಲಾಗಿದೆ. ಫೈನಾನ್ಸ್ ಗೆ ನುಗ್ಗಿದ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಫೋರೇನ್ಸಿಕ್, ಬೆರಳಚ್ಚು ತಜ್ಞರ ತಂಡ ಹಾಗೂ ಬಜಪೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್ ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ತಂದಿಟ್ಟ ಆಸಿಡ್ ಕ್ಲೋರೋಫಾರ್ಮ್ ಎನ್ನಲಾಗಿದ್ದು ಹೆಚ್ಚುವರಿ ತಪಾಸಣೆಯ ಬಳಿಕ ದೃಢಪಡಬೇಕಾಗಿದ್ದು ವ್ಯವಸ್ಥಿತ ಸಂಚು ನಡೆಸಿ ಹಗಲುದರೋಡೆಯ ಪ್ರಯತ್ನ ನಡೆಸಿರುವುದರ ಹಿಂದೆ ಜಾಲವೊಂದರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page