ಹೊಸಾಡು:ಕಂಟ ಕಡಿದು ಹೋಗಿ ಕೃಷಿ ಭೂಮಿಗೆ ಹಾನಿ

ಕುಂದಾಪುರ:ಎಡಬಿಡದೆ ಸುರಿದ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಾಡು ಬೈಲಿನಲ್ಲಿ ತೋಡಿನ ಕಂಟ ಕಡಿದು ಹೋಗಿ ವ್ಯಾಪಕ ನಷ್ಟ ಉಂಟಾಗಿದೆ.ಮಳೆ ನಡುವೆ ಕೃಷಿಕರು ಕಂಟವನ್ನು ಕಟ್ಟುವುದರಲ್ಲೆ ಹೈರಾಣಾಹಿ ಹೋಗಿದ್ದಾರೆ.ಘಟನಾ ಸ್ಥಳಕ್ಕೆ ಹೊಸಾಡು ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮ ಕರಣಿಕರ ಕಛೇರಿ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.