ಶಿರೂರು:ಕಳಚಿಕೊಂಡ ರೈಲು ಬೋಗಿ,ತಪ್ಪಿದ ಬಾರಿ ದೊಡ್ಡ ದುರಂತ

ಬೈಂದೂರು:ಗೂಡ್ಸ್ ರೈಲೊಂದರ ಬೋಗಿ ಕಳಚಿಕೊಂಡು ಒಂದು ಗಂಟೆಗೂ ಅಧಿಕ ರಸ್ತೆ ತಡೆ ಉಂಟಾದ ಘಟನೆ ಸೋಮವಾರ ಮುಂಜಾನೆ ಹಡವಿನಕೋಣೆ ರೈಲ್ವೆ ಗೇಟ್‌ನಲ್ಲಿ ನಡೆದಿದೆ.
ಮಂಗಳೂರಿನಿಂದ ಮಡಗಾಂವ್ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಮದ್ಯ ಭಾಗದಲ್ಲಿ ಬೋಗಿಗಳು ಕಳಚಿಕೊಂಡು ಬೇರ್ಪಟ್ಟ ಪರಿಣಾಮ ಆತಂಕ ಉಂಟಾಯಿತು.ಮಾತ್ರವಲ್ಲದೆ ರೈಲ್ವೆ ಗೇಟ್ ಹಾಕಿದ ಕಾರಣ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು.ತಕ್ಷಣ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಅಲ್ಲಿನ ಬೋಗಿಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಇದರಿಂದಾಗಿ ಸುಮಾರು ಒಂದು ಗಂಟೆ ರೈಲ್ವೆ ಸಂಚಾರ ಮತ್ತು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.ರೈಲು ಬೋಗಿ ಕಳಚಿದ ಬಗ್ಗೆ ಕಾರಣಗಳು ತಿಳಿದು ಬಂದಿಲ್ಲ.