ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆ ಗಂಗೊಳ್ಳಿ :ಶಾಲಾ ಸಂಸತ್ತು ಉದ್ಘಾಟನೆ

ಸ್ಟೆಲ್ಲಾ ಮಾರಿಸ್ ಶಾಲೆಯ ಸಂಸತ್ತಿನ ಉದ್ಘಾಟನಾ ಸಮಾರಂಭವು ದಿನಾಂಕ: 2024, ಜೂನ್ 25 ರಂದು ಬಹಳ ಅರ್ಥಪೂರ್ಣವಾಗಿ ಶಾಲಾ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ರೆಸೆನ್ಸ್ ಎ.ಸಿ, ಸಿಸ್ಟರ್ ಡಯಾನ ಎ. ಸಿ, ಶಾಲೆಯ ಹಳೆ ವಿದ್ಯಾರ್ಥಿನಿ ಪ್ರಸ್ತುತ ಗುಮಾಸ್ತೆ ಶ್ರೀಮತಿ ಸಂಧ್ಯಾ, ಶಾಲಾ ನಾಯಕ ಮತ್ತು ಉಪನಾಯಕ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸತ್ತಿನ ರಾಜ್ಯಪಾಲೆ ಸಿಸ್ಟರ್ ಕ್ರಿಸ್ಸೆನ್ಸ್ ಮಂತ್ರಿಗಳ ಪ್ರತಿಜ್ಞೆ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ, ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿ ಶ್ರೀಭಾಸ್ಕರ್ ಖಾರ್ವಿ ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಖಾರ್ವಿರವರು ಈ ಶಾಲೆಯಲ್ಲಿ ಪಡೆದ ಶಿಕ್ಷಣದ ಅನುಭವವನ್ನು ಹಂಚಿಕೊಂಡರು. ಸಂವಿಧಾನದ ಮೂಲಭೂತ ನಿಯಮಗಳನ್ನು ಭಗಿನಿ.ಡಯಾನರವರು ತಿಳಿಸಿದರು.
ಶಾಲಾ ನಾಯಕನಾಗಿ ಕುಮಾರ ಆದಿತ್ಯ ಖಾರ್ವಿ, ಉಪನಾಯಕನಾಗಿ ಕುಮಾರ ವಿಕಾಸ ಖಾರ್ವಿ, ವಿರೋಧ ಪಕ್ಷದ ನಾಯಕಿಯಾಗಿ ಕುಮಾರಿ ಸ್ಪೂರ್ತಿ ಮತ್ತು ಇತರ 16 ಮಂತ್ರಿಗಳೊಂದಿಗೆ ತಮ್ಮ ಜವಾಬ್ದಾರಿಯನ್ನು ಸಭೆಯಲ್ಲಿ ಓದಿ ಹೇಳಿ ಅಧಿಕೃತ ಕಡತಕ್ಕೆ ಸಹಿ ಹಾಕಿ, ಬ್ಯಾಡ್ಜ್ ಧರಿಸಿಕೊಂಡರು.
ಕುಮಾರಿ ಕೃತಿಕಾ ಮತ್ತು ಭಾನ್ವಿತ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಸ್ಟರ್ ವೈಲೆಟ್ ಎ.ಸಿ ಇವರ ಮಾರ್ಗದರ್ಶನದಲ್ಲಿ, ಶಿಕ್ಷಕ- ಶಿಕ್ಷಕೇತರ ವೃಂದದವರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಗೊಂಡಿತು. ಶಾಲಾ ಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.