ಬೆಳ್ತಂಗಡಿ:ವಿದ್ಯುತ್ ಸ್ಪರ್ಶಿಸಿ ಯುವತಿ ಸಾವು

ಬೆಳ್ತಂಗಡಿ:ತುಂಡಾದ ವಿದ್ಯುತ್ ತಂತಿ ಯಿಂದ ವಿದ್ಯುತ್ ಪ್ರವಹಿಸಿ ಪ್ರತೀಕ್ಷಾ (21) ಎಂಬ ಯುವತಿ ಸಾವನ್ನಪ್ಪಿದ್ದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗಳ ಎಂಬಲ್ಲಿ ಗುರುವಾರ ನಡೆದಿದೆ.
ಮನೆಯಿಂದ ಹೊರಗೆ ಹೋಗಿ ಪಾರ್ಸೆಲ್ ತರುವ ವೇಳೆ ದಾರಿ ಮಧ್ಯೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಯಿಂದ ಪ್ರತೀಕ್ಷಾ ಶೆಟ್ಟಿ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದರು.ಈ ವೇಳೆ ಪ್ರತೀಕ್ಷಾರನ್ನು ರಕ್ಷಿಸಿಸಲು ಹೋದ ತಂದೆ ಗಣೇಶ್ ಶೆಟ್ಟಿಗೂ ವಿದ್ಯುತ್ ಶಾಕ್ ತಗುಲಿದೆ.
ಪ್ರತೀಕ್ಷಾ ರವರು ಕೊಕ್ಕಡ ಮೆಡಿಕಲ್ ನಲ್ಲಿ ವೃತ್ತಿ ಜೀವನ ನಡೆಸುತ್ತಿದ್ದಾರೆ.ದ.ಕ ಜಿಲ್ಲೆಯಲ್ಲಿ ಗುರುವಾರ 24 ಗಂಟೆ ಒಳಗೆ ಮೂರು ಜನ ಮೃತಪಟ್ಟಿದ್ದಾರೆ.