ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

ಕುಂದಾಪುರ:ತಾಲೂಕಿನ ಬೈಂದೂರು ವಲಯದ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು.ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸುರೇಂದ್ರ ಆಲೂರು ಉದ್ಘಾಟಿಸಿದರು.ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಆಲೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ನಾರಾಯಣ ಶೆಟ್ಟಿ,ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಲೀನಾ ಕಾರ್ಢಿನ್,ಯಕ್ಷಗುರು ಪ್ರದೀಪ ಶೆಟ್ಟಿ ನಾರ್ಕಳಿ,ನೋಡಲ್ ಶಿಕ್ಷಕಿ ಅಮೃತಾ,ಶಿಕ್ಷಕವೃಂದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಿಕ್ಷಕರಾದ ಉದಯ ಕುಮಾರ ಶೆಟ್ಟಿ ಸ್ವಾಗತಿಸಿದರು.ಶಶಿಧರ ಶೆಟ್ಟಿ ನಿರ್ವಹಿಸಿದರು.ಪ್ರವೀಣ ಕುಮಾರ ಶೆಟ್ಟಿ ವಂದಿಸಿದರು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರ ಶಿಪಾರಸ್ಸಿನ ಮೇರೆಗೆ ಯಕ್ಷಗಾನ ತರಗತಿಯನ್ನು ಆಲೂರು ಶಾಲೆಯಲ್ಲಿ ಪ್ರಾರಂಭಿಸಲಾಗಿದೆ.ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತದೆ.