ಬೈಂದೂರು ಯು.ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪರಿಷತ್ ಚುನಾವಣೆ
ಕುಂದಾಪುರ:ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ
ವಿದ್ಯಾರ್ಥಿಗಳ ಪರಿಷತ್ತಿಗೆ ಚುನಾವಣೆ ನಡೆಯಿತು.
ಜುಲೈ 14,2024 ಶುಕ್ರವಾರದಂದು ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಅಮಿತಾ ಶೆಟ್ಟಿ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪರಿಷತ್ತಿಗೆ ಚುನಾವಣೆ ನಡೆಯಿತು.ಶಾಲಾ ಚಟುವಟಿಕೆಗಳು ಮತ್ತು ಸೇವಾ ಯೋಜನೆಗಳನ್ನು ಆಯೋಜಿಸುವ ಮತ್ತು ನಿರ್ವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳನ್ನು ಬೆಳೆಸಲು ವೇದಿಕೆಯನ್ನು ಒದಗಿಸುವುದು ವಿದ್ಯಾರ್ಥಿ ಪರಿಷತ್ತಿನ ನೇಮಕದ ಉದ್ದೇಶವಾಗಿದೆ.
ಮೊದಲ ಸುತ್ತಿನಲ್ಲಿ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ತಾವು ನಿಂತಿರುವ ಸ್ಥಾನಗಳಿಗೆ ಆಯ್ಕೆಯಾಗಲು ಮತಯಾಚನೆ ಮಾಡಿದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಮತದಾನ ಮಾಡಿದರು.ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿ ನಾಯಕಿ ಹುದ್ದೆಗಳಿಗೆ ಒಟ್ಟು 12 ಜನ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದರು.ಎರಡನೇ ಸುತ್ತಿನಲ್ಲಿ ಮತಗಟ್ಟೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸಹ ಶಿಕ್ಷಕಿ ಶ್ರೀಮತಿ ರಮ್ಯಾ ಹಾಗೂ ಸಹ ಶಿಕ್ಷಕಿ ಶ್ರೀಮತಿ ರೇಷ್ಮಾಅಡಪ್ಪಾ, ಶ್ರೀಮತಿ ರೇಷ್ಮಾ ಹಾಗೂ ಕುಮಾರಿ ವಿದ್ಯಾ ರವರು ಮತಗಟ್ಟೆಯ ಸಹಾಯಕ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಮತದಾನದ ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಮತ ಎಣಿಕೆ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು. ಪ್ರಸ್ತುತ 2024-25 ನೇ ಸಾಲಿನ ಶ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ನಾಯಕನಾಗಿ ಕುಮಾರ.ನಫೀಸ್ ಹಾಗೂ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ. ಮೆಹೆಕ್ ಅವರು ಆಯ್ಕೆ ಆಗಿರುತ್ತಾರೆ.
ಮುಖ್ಯೋಪಾಧ್ಯಾಯಿನಿಯವರಾದ ಅಮಿತಾ ಶೆಟ್ಟಿಯವರು ಹಾಗೂ ಸಿಬ್ಬಂದಿ ವರ್ಗದವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿದರು.