ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಪ್ರಧಾನ ಕಛೇರಿ ನವೀಕೃತ ಮೇಲಂತಸ್ತಿನ ಕಟ್ಟಡ ಉದ್ಘಾಟನೆ

Share

Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಪ್ರಧಾನ ಕಛೇರಿ ಮತ್ತು ಮೇಲಂತಸ್ತಿನ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಾವುಂದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಸಂಘದ ನವೀಕೃತ ಪ್ರಧಾನ ಕಛೇರಿ ಮತ್ತು ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ದಿ.ಕಾಳಿಂಗ ನಾವುಡ ವಿರಚಿತ ನಾಗಶ್ರೀ ಯಕ್ಷಗಾನ ಕಾರ್ಯಕ್ರಮ ಜರುಗಿತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅಧ್ಯಕ್ಷರಾದ,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಡಾ.ಎಂ ರಾಜೇಂದ್ರ ಕುಮಾರ್ ಅವರು ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ,1955 ರಲ್ಲಿ ಆರಂಭಗೊಂಡಿದ್ದ ಸಂಘವು ಹಲವಾರು ಏಳು ಬೀಳುಗಳ ನಡುವೆ ಸಮೃದ್ಧವಾಗಿ ಬೆಳೆದು ನಿಂತ್ತಿದೆ.ಸಂಘದ ಅಭಿವೃದ್ಧಿಗೆ ಎಸ್.ರಾಜು ಪೂಜಾರಿ ಅವರ ಕೊಡುಗೆ ಶ್ಲಾಘನೀಯವಾದದ್ದು.ಸಹಕಾರಿ ಸಂಸ್ಥೆಗಳ ಪ್ರಮುಖ ಉದ್ದೇಶ ಲಾಭಗಳಿಸುವುದು ಅಲ್ಲಾ,ಸೇವೆ ಕೊಡವುದಾಗಿದೆ.ಕೃಷಿಕರಿಗೆ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡುವುದರ ಮೂಲಕ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಸೇವೆಯನ್ನು ಮಾಡುತ್ತಿದೆ ಎಂದರು.ನಮ್ಮ ಜಿಲ್ಲೆಯ 170 ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಲಾಭದಲ್ಲಿದ್ದು,ಸಾಲ ವಸೂಲಾತಿಯಲ್ಲಿಯೂ ಗಣನೀಯವಾದ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಜನರಲ್ಲಿ ವಿಶ್ವಾಸಭರಿತ ಸೇವೆಯನ್ನು ಕೋ ಆಪರೇಟಿವ್ ಸಂಸ್ಥೆಗಳು ನೀಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದೆ.ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಕೋಆಪರೇಟಿವ್ ಸಂಸ್ಥೆಗಳು ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಅವರು ಮಾತನಾಡಿ,ಹಿರಿಯರು ಮತ್ತು ನಿರ್ದೇಶಕರು ಹಾಗೂ ಸದಸ್ಯರ ನೆರವಿಂದ ಸಂಘವೂ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಾ ಬಂದಿದ್ದು.ಹಿಂದೆ ನಷ್ಟದಲ್ಲಿದ ನಮ್ಮ ಸಂಸ್ಥೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಬಹಳಷ್ಟು ಸಹಕಾರ ನೀಡುವುದರ ಮೂಲಕ ನಮಗೆ ಬೆಂಬಲವಾಗಿ ನಿಂತಿದ್ದಾರೆ ಅವರ ಕೊಡುಗೆ ನಾವು ಎಂದಿಗೂ ಮರೆಯಲಾರೆವೂ ಎಂದು ಕೃತಜ್ಞತೆಯನ್ನು ಸಲ್ಲಿಸಿದರು.
ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಅವರು ಮಾತನಾಡಿ,ಗ್ರಾಮದ ಜನರಿಗೆ,ಕೃಷಿಕರಿಗೆ ಮರವಂತೆ ಬಡಾಕೆರೆ ಸಂಘದ ಮೂಲಕ ಇನ್ನಷ್ಟು ಸೇವೆ ದೊರಕುಂತೆ ಆಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ,ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದತ್ತ ಕೊಂಡು ಹೋಗಿ ಜನರಿಗೆ ಉತ್ತಮ ಸೇವೆ ನೀಡುತ್ತಿರುವುದು ಸಂಘ ಅಧ್ಯಕ್ಷರಾದ ರಾಜು ಪೂಜಾರಿ ಅವರ ನಾಯಕತ್ವ ಗುಣಕ್ಕೆ ಹಿಡಿದ ಕೈಗನ್ನಡಿ ಆಗಿದೆ.ಜನರಿಗೆ ಮತ್ತು ರೈತರಿಗೆ ಒಳ್ಳೆ ರೀತಿಯಲ್ಲಿ ಇನ್ನಷ್ಟು ಸೇವೆ ದೊರಕುವಂತಾಗಲಿ ಎಂದು ಹರಸಿದರು.
ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ,ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ವಿಭಾಗ ಅರುಣ್ ಕುಮಾರ್ ಎಸ್.ವಿ,ಸಹಕಾರ ಸಂಘಗಳ ಉಪನಿಬಂಧಕರು ಲಾವಣ್ಯ.ಕೆ.ಆರ್,ಎಚ್ ಹರಿಪ್ರಸಾದ್ ಶೆಟ್ಟಿ,ಮಲ್ಯಾಡಿ ಶಿವರಾಮ ಶೆಟ್ಟಿ,ನಾವುಂದ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ,ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಯರಾಮ ರೈ,ಹರಿಶ್ಚಂದ್ರ ಶೆಟ್ಟಿ,ಮೋಹನಪ್ಪ ಶೆಟ್ಟಿ,ಮರವಂತೆ ಬಡಾಕೆರೆ ಸಂಘದ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ,ನಿರ್ದೇಶಕರಾದ ವಾಸು ಪೂಜಾರಿ,ಭೋಜ ನಾಯ್ಕ,ಜಗದೀಶ ಪಿ ಪೂಜಾರಿ,ರಾಮಕೃಷ್ಣ ಖಾರ್ವಿ,ಪ್ರಕಾಶ ದೇವಾಡಿಗ,ಎಂ ಅಣ್ಣಪ್ಪ ಬಿಲ್ಲವ,ನಾರಾಯಣ ಶೆಟ್ಟಿ,ರಾಮ,ನಾಗಮ್ಮ,ಸರೋಜ ಆರ್ ಗಾಣಿಗ,ನಾಮ ನಿರ್ದೇಶಿತ ಸದಸ್ಯ ಎಂ ವಿನಾಯಕ ರಾವ್,ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಶಿವರಾಮ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಆಳ್ವೆಗದ್ದೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.ನರಸಿಂಹ ದೇವಾಡಿಗ ವಂದಿಸಿದರು.
ಡಾ.ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.25 ವರ್ಷ ಪೂರೈಸಿದ ಸ್ವಾತಿ ಸ್ವಸಹಾಯ ಸಂಘವನ್ನು ಗೌರವಿಸಲಾಯಿತು.ಚೈತನ್ಯ ವಿಮಾ ಪರಿಹಾರ ಮೊತ್ತವನ್ನು ವಿತರಿಸಲಾಯಿತು.
ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತಲೂ ಉತ್ತಮ ರೀತಿಯಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವುದರ ಮುಖೇನ ಜನಸ್ನೇಹಿ ಆಗಿರುವ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು.ಸಂಘದ ಸದಸ್ಯರಿಗೆ ಹಾಗೂ ಕೃಷಿಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದರ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದೇನೆ.ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಅವರ ನೇತೃತ್ವದಲ್ಲಿ ಮರವಂತೆ,ನಾವುಂದ ಪ್ರಧಾನ ಕಛೇರಿ,ಹೇರೂರು ಹಾಗೂ ಬಡಾಕೆರೆ ಕಚೇರಿಯನ್ನು ಸುಸಜ್ಜಿತವಾಗಿ ನಿರ್ಮಿಸುವುದರ ಮುಖೇನ ಸಂಘದ ಅಭಿವೃದ್ಧಿಗೆ ಭದ್ರವಾದ ಬುನಾದಿಯನ್ನು ಹಾಕಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ತನ್ನದೆ ರೀತಿಯಲ್ಲಿ ಹೆಸರನ್ನು ಗಳಿಸಿರುವ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಅವಿಭಜಿತ ದ.ಕ ಜಿಲ್ಲೆಯಲ್ಲಿ ಜನಪ್ರೀತಿ ಮುಖೇನ ಒಳ್ಳೆ ಹೆಸರನ್ನು ಗಳಿಸಿದೆ.

Advertisement

ವರದಿ:-ಜಗದೀಶ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

Advertisement
Advertisement


Share

Leave a comment

Your email address will not be published. Required fields are marked *

You cannot copy content of this page