ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ,ರಕ್ತ ಚಂದನ ಮರ ಹಸ್ತಾಂತರ,ಭವ್ಯ ಮೆರವಣಿಗೆ


ಕುಂದಾಪುರ:ತಾಲೂಕಿನ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹ ರಚನೆಗೆ ಬಳಕೆ ಮಾಡಲಿರುವ ರಕ್ತ ಚಂದನ ಮರವನ್ನು ಕೊಲ್ಲೂರಿನಿಂದ ಕಟ್ ಬೇಲ್ತೂರು ಅಮ್ಮನವರ ಸನ್ನಿಧಾನದ ವರೆಗೆ ಭವ್ಯ ಮೆರವಣಿಗೆ ಮೂಲಕ ಬುಧವಾರ ಬರಮಾಡಿಕೊಳ್ಳಲಾಯಿತು.
ಇತಿಹಾಸ ಪ್ರಸಿದ್ಧ ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ ರಕ್ತ ಚಂದನ ಮರವನ್ನು ಶಿವಮೊಗ್ಗ ದಿಂದ ಕೊಲ್ಲೂರು ಮಾರ್ಗವಾಗಿ ಪುರ ಮೆರವಣಿಗೆ ಮೂಲಕ ಅಮ್ಮನವರ ಸನ್ನಿಧಾನವನ್ನು ಪ್ರವೇಶ ಮಾಡಿದೆ.ಈ ಸಂದರ್ಭದಲ್ಲಿ ಶ್ರೀ ಭದ್ರಮಹಾಕಾಳಿ ದೈವಸ್ಥಾನ ಕಟ್‍ಬೇಲ್ತೂರು ಮೊಕ್ತೇಸರರು,ಮೂರು ಮನೆಯವರು ಹಾಗೂ ಮೂರು ಗ್ರಾಮಸ್ಥರು,ಆಡಳಿತ ಸಮಿತಿ ಸದಸ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು.
ಪುರಾತ ಇತಿಹಾಸವನ್ನು ಹೊಂದಿರುವ ದೈವಸ್ಥಾನಗಳಲ್ಲಿ ಒಂದಾದ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ಅಮ್ಮನವರ ನೂತನ ವಿಗ್ರಹಕ್ಕೆ ಅಗತ್ಯವಾಗಿ ಬೇಕಾಗಿರುವ ರಕ್ತ ಚಂದನ ಮರವನ್ನು ರಾಜ್ಯ ಸರಕಾದ ಅನುಮತಿ ಮೇರೆಗೆ ಕಾನೂನು ಬದ್ಧವಾಗಿ ದೈವಸ್ಥಾನದ ಆಡಳಿತ ಸಮಿತಿ ಅವರಿಗೆ ಬುಧವಾರ ಕಟ್‍ಬೇಲ್ತೂರುನಲ್ಲಿ ಹಸ್ತಾಂತರ ಮಾಡಲಾಯಿತು.