ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳಿಗೆ ಪುಸ್ತಕ ವಿತರಣೆ

ಕುಂದಾಪುರ:ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ವಿದ್ಯಾರ್ಥಿಗಳಿಗೆ ಕೈಗಾರಿಕೋದ್ಯಮಿ ಹಾಗೂ ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ ಅವರು ಉಚಿತವಾಗಿ ಪುಸ್ತಕ ವಿತರಣೆ ಹಾಗೂ ಬೋಜನ ವ್ಯವಸ್ಥೆ ಮಾಡಿ ವಿಶೇಷ ಮಕ್ಕಳ ಕಾರ್ಯವೈಖರಿ ಹಾಗು ಶಿಕ್ಷಕರ ಸೇವಾ ಮನೋಭಾವನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜೀವ ಪೂಜಾರಿ ವಂಡ್ಸೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಉಭಯ ಕುಶಲೋಪಚರಿ ವಿಚಾರಿಸಿದರು. ಈ ಸಂದರ್ಭದಲ್ಲಿ ರವಿ ದೇವಾಡಿಗ ಉಪ್ಪಿನಕುದ್ರು,ರಘುರಾಮ ದೇವಾಡಿಗ ಕಿರಿಮಂಜೇಶ್ವರ ಮಾಸ್ಟರ್ ಭರತ್ ದೇವಾಡಿಗ, ಶಾಲಾ ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ ಎಚ್ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































