ವಿಶ್ವ ದೇವಾಡಿಗ ಮಹಾಮಂಡಳ ನಿಯೋಗ ಭೇಟಿ,ಸಂಘಟನೆಗಳ ನೋಂದಾವಣೆ ಅಭಿಯಾನ
ಕುಂದಾಪುರ:ವಿಶ್ವ ದೇವಾಡಿಗ ಮಹಾಮಂಡಲ ನಿಯೋಗದ ವತಿಯಿಂದ ದೇವಾಡಿಗ ಸಮಾಜ ಬಾಂಧವರ ಗಣತಿ ಮತ್ತು ಸಮಾಜದ ಸಂಘಟನೆಗಳ ನೋಂದಣಿ ಅಭಿಯಾನ ಕಾರ್ಯಕ್ರಮ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಿತು.
ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಹಿರಿಯಡ್ಕ ಮೋಹನದಾಸ್ ರವರು ಮಾತನಾಡಿ ದೇವಾಡಿಗ ಸಮಾಜ ಬಾಂಧವರ ಕುರಿತಾದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಸೂಕ್ತ ವೇದಿಕೆಯನ್ನು ಕಲ್ಪಿಸಿ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಹಾಮಂಡಲದ ಉಪಾಧ್ಯಕ್ಷರಾದ ನಾಗರಾಜ್.ಜಿ ದೇವಾಡಿಗ , ಸಂಘಟನಾ ಕಾರ್ಯದರ್ಶಿಗಳು ಹಾಗೂ ಉಪ್ಪುಂದ ಸಂಘದ ಗೌರವಾಧ್ಯಕ್ಷರಾದ ಶ್ರೀ ಜನಾರ್ದನ ಎಸ್ ದೇವಾಡಿಗ ಮತ್ತು ಶ್ರೀ ರವಿ ಎಸ್ ದೇವಾಡಿಗ ಹಾಗೂ ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಹೆಚ್ ದೇವಾಡಿಗ ಗೌರವಾಧ್ಯಕ್ಷರಾದ ಬಿ.ಎ ಮಂಜು ದೇವಾಡಿಗ ಮತ್ತು ಮಾಧವ ದೇವಾಡಿಗ ಹಾಗೂ ಪ್ರಧಾನ ಕಾರ್ಯದರ್ಶಿ ಸುಧಾಕರ ದೇವಾಡಿಗ
ಉಪ್ಪುಂದ, ಬೈಂದೂರು,ನಾಗೂರು,ಮರವಂತೆ,ಕಟ್ಟಿನಮಕ್ಕಿ,ತ್ರಾಸಿ ಮತ್ತು ಹಟ್ಟಿಯಂಗಡಿ ಸೇರಿದಂತೆ ವಿವಿಧ ಭಾಗಗಳ ದೇವಾಡಿಗ ಸಂಘದ ಪ್ರಮುಖ ಪದಾಧಿಕಾರಿಗಳು
ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































