ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟನೆ
ಕುಂದಾಪುರ:ಜೀವ ಜಲದಷ್ಟೆ ರಕ್ತವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಪ್ರತಿಯೊಬ್ಬರು ಕ್ಲಪ್ತ ಸಮಯದಲ್ಲಿ ರಕ್ತವನ್ನು ದಾನ ಮಾಡುವುದರಿಂದ ರೋಗಿಗಳ ಪ್ರಾಣವನ್ನು ಕಾಪಾಡಬಹುದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಆಲೂರು,ಗ್ರಾಮ ಪಂಚಾಯಿತಿ ಆಲೂರು,ಶ್ರೀರಾಮೇಶ್ವರ ಯಕ್ಷಗಾನ ಕಲಾ ಸಂಘ ಆಲೂರು,ಗೆಳೆಯರ ಬಳಗ ಆಲೂರು,ಕಲ್ಪತರು ಕಲಾವಿದರು ಆಲೂರು ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ಮೂಕಾಂಬಿಕ ಸಭಾಭವನ ಆಲೂರುನಲ್ಲಿ ಭಾನುವಾರ ನಡೆದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಪಂಚಾಯಿತಿ ಸದಸ್ಯ ರವಿ ಶೆಟ್ಟಿ,ಅಪ್ಪು ಕುಲಾಲ್,ಬಾಂದವ್ಯ ಬಳಗದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ,ಪ್ರದೀಪ್ ಕುಮಾರ್ ಶೆಟ್ಟಿ,ಸುನಿಲ್ ಪೂಜಾರಿ,ನಾಗರಾಜ್,ರಾಜೇಶ್ ಪೂಜಾರಿ,ರಾಘವೇಂದ್ರ ಜೋಯಿಸ್,ಶ್ರೀರಾಮ ಮಹಿಳಾ ಬಳಗದ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶ್ರೀರಾಮೇಶ್ವರ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು.ಉದಯ್ ಕುಮಾರ್ ಶೆಟ್ಟಿ ನಿರ್ವಹಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































