ಅನಾರೋಗ್ಯ ಪೀಡಿತ ವ್ಯಕ್ತಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ರಕ್ತದಾನ

ಕುಂದಾಪುರ:ಅನಾರೋಗ್ಯ ಪೀಡಿತರಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಶಂಕರನಾರಾಯಣ ಗ್ರಾಮದ ಉದಯ ಆಚಾರ್ಯ ಎನ್ನುವ ವ್ಯಕ್ತಿಗೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಖುದ್ದಾಗಿ ರಕ್ತದಾನವನ್ನು ಮಾಡುವುದರ ಮುಖೇನ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಕುಂದಾಪುರ ತಾಲೂಕಿನ ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪ್ರದ ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆವಿದ್ದು.ಬ್ಲಡ್ ಬ್ಯಾಂಕ್‌ಗಳಲ್ಲಿ ವಿಚಾರಿಸಿದಾಗ ರಕ್ತದ ಕೊರತೆಯಿಂದ ಸೂಕ್ತ ಸಮಯದಲ್ಲಿ ರೋಗಿಗೆ ರಕ್ತ ಸಿಗಲಿಲ್ಲ.ರೋಗಿಗೆ ತುರ್ತು ಸಂದರ್ಭದಲ್ಲಿ ರಕ್ತ ನೀಡಲೆ ಬೇಕಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.ಯಾವುದೇ ರೀತಿಯ ಪ್ರಯತ್ನದ ನಡುವೆ ರಕ್ತ ಸಿಗದ ಕಾರಣ ರೋಗಿಯ ನೆರವಿಗೆ ನಿಂತವರೇ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು.
ರೋಗಿಯ ಕುಟುಂಬದವರ ತುರ್ತು ಕೆರೆಗೆ ಸ್ಪಂದಿಸಿದ
ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೇ ಖುದ್ದಾಗಿ ರಾತ್ರಿಗೆ ಕುಂದಾಪ್ರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ.ಶಾಸಕರ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ರಕ್ತದ ಅವಶ್ಯಕತೆ ಬಹಳಷ್ಟು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಶಾಸಕರು ವಿನಂತಿಸಿ ಕೊಂಡಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































