ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 10% ಡಿವಿಡೆಂಟ್ ಘೋಷಣೆ

Share

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅದರ ಸಭೆ ಜಿ.ಎಸ್.ಆಚಾರ್ಯ ಸ್ಮಾರಕ ಸಭಾಭನದಲ್ಲಿ ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಕೃಷಿಕರು,ಕೂಲಿ ಕಾರ್ಮಿಕರು,ಬಡ ವರ್ಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ಶ್ರೀಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜನೋಪಯೋಗಿ ಕೆಲಸಗಳ ಮುಖಾಂತರ ಹೆಸರನ್ನು ಗಳಿಸಿದೆ.ಅಶಕ್ತರಿಗೆ ನೆರವು,ವಿದ್ಯಾರ್ಥಿ ವೇತನ,ಆರೋಗ್ಯ ಶಿಬಿರ ಆಯೋಜನೆ,ಶಾಲೆಗಳಿಗೆ ಪಿಠೋಪಕರಣಗಳನ್ನು ಕೊಡುಗೆಯಾಗಿ ನೀಡುತ್ತಾ ಸಂಘವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಶ್ರೀಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಮಾತನಾಡಿ,ಪ್ರಸ್ತುತ ಸಂಘವು 900 ಸದಸ್ಯರುಗಳನ್ನು ಹೊಂದಿದ್ದು ವಾರ್ಷಿಕವಾಗಿ 8.ಕೋಟಿ ವ್ಯವಾಹಾರವನ್ನು ನಡೆಸಲಾಗಿದೆ.ವರದಿ ವರ್ಷದಲ್ಲಿ 7,19,000 ಲಾಭಾಂಶವನ್ನು ಗಳಿಸಲಾಗಿದ್ದು ಸಂಘದ ಸದಸ್ಯರಿಗೆ 10% ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.ಕ್ಲಪ್ತ ಸಮಯದಲ್ಲಿ ಸಾಲ ಮರುಪಾತಿ ಮಾಡುವವರಿಗೆ 1% ರಿಯಾತಿ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಎಂದರು.5,98,18,000 ರೂ ಅನ್ನು ಸಾಲ ನೀಡಲಾಗಿದ್ದು.96 ಶೇಕಡಾ ಸಾಲವನ್ನು ವಸೂಲಾತಿ ಮಾಡಲಾಗಿದೆ.ಸಂಘವು ವಿವಿಧ ಸಹಕಾರ ಸಂಘಗಳಲ್ಲಿ 1,59,11,000 ರಷ್ಟು ಹೂಡಿಕೆಯನ್ನು ಮಾಡಿದೆ.13,20,400 ರೂ ಅನ್ನು ಪಾಲು ಹಣ ಹೊಂದಲಾಗಿದೆ ಎಂದು ವಿವಿರಿಸಿದರು.
ಈ ಸಂದರ್ಭದ್ಲಲಿ ಸಂಘದ ಉಪಾಧ್ಯಕ್ಷ ರವೀಶ ಹೊಳ್ಳ,ಸಿ.ಇ.ಒ ಅಶ್ವಿನಿ,ಗೌರವ ಸಲಹೆಗಾರ ವಿಶ್ವಂಭರ ಐತಾಳ್,ಲೆಕ್ಕಿಕ ಶ್ರೀಕರ ಐತಾಳ್ ಮತ್ತು ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page