ಶೃಂಗಾರಗೊಂಡ ಯುವ ಮತಕಟ್ಟೆ

ಕುಂದಾಪುರ:ಮಂಗಳವಾರ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ತಾಲೂಕು ಪಂಚಾಯತ್ ಕುಂದಾಪುರ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿನ ಯುವ ಮತಗಟ್ಟೆಯನ್ನು ತಳಿರು ತೋರಣಗಳಿಂದ ವಿಶೇಷವಾದ ರೀತಿಯಲ್ಲಿ ಸೋಮವಾರ ಶೃಂಗಾರಿಸಲಾಯಿತು.
ಮತದಾರರು ಮತ ಕೇಂದ್ರಕ್ಕೆ ತೆರಳಿ ಸುಸೂತ್ರವಾಗಿ ಮತವನ್ನು ಚಲಾಯಿಸಲು ಹಾಗೂ ಮತದಾರರನ್ನು ಮತ ಕೇಂದ್ರದತ್ತಾ ಆಕರ್ಷಿಸಲು ಉಡುಪಿ ಜಿಲ್ಲಾಡಳಿತ ಮತ್ತು ಕುಂದಾಪುತ ತಾಲೂಕು ಸ್ವೀಪ್ ಸಮಿತಿ ಹಲವಾರು ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ.ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಕೋರಿಕೊಂಡಿದೆ.ಯುವ ಮತ ಕೇಂದ್ರವನ್ನು ಶೃಂಗಾರಗೊಳಿಸುವಲ್ಲಿ ಹೊಸಾಡು ಸಂಜೀವಿನಿ ಸಂಘದ ಸದಸ್ಯರು ಕೈಜೋಡಿಸಿದ್ದಾರೆ.






















































































































































































































































































































































































































































































































































































































































































































































































































































































































































































































































































































































































































































































































































































































































































