ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ

Share

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ,ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.
ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬಿಂಬ ಪ್ರತಿಷ್ಠೆ,ಕುಂಭ ಅಭಿಷೇಕ,ಅಷ್ಟೋತ್ತರ ಕಲಶ ಸ್ಥಾಪನೆ,ಬ್ರಹ್ಮಕಲಶ ಸ್ಥಾಪನೆ,ಮಹಾ ಪೂಜೆ,
ಪರಿ ಕಲಶ ಸಹಿತ ಬ್ರಹ್ಮಕಲಾಶಾಭೀಷೇಕವನ್ನು ನೆರವೇರಿಸಲಾಯಿತು.ಮಹಾ ಅನ್ನಸಂತರ್ಪಣೆ,ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಾರಾಯಣ ಹೆಬ್ಬಾರ್ ಮಾತನಾಡಿ,ಶ್ರೀಬೊಬ್ಬರ್ಯ ದೇವರ ದೇವಸ್ಥಾನವನ್ನು 40 ವರ್ಷಗಳ ಹಿಂದೆ ನಿರ್ಮಾಣಮಾಡಲಾಗಿದೆ.ನಾಲ್ಕು ದಶಕಗಳ ಬಳಿಕ ಶ್ರೀದೇವರ ಅನುಗ್ರಹದಿಂದ ನೂತನ ಶಿಲಾಮಯ ದೇಗುಲವನ್ನು ನಿರ್ಮಿಸಲಾಗಿದ್ದು ಎಲ್ಲವೂ ದೇವರೆ ಮಾಡಿಸಿಕೊಂಡಿದ್ದಾನೆ ಎಂದು ಹೇಳಿದರು.
ದೇವಸ್ಥಾನದ ಸದಸ್ಯರಾದ ರಾಜು.ಎನ್ ದೇವಾಡಿಗ ಮಾತನಾಡಿ,ಬಹಳಷ್ಟು ಇತಿಹಾಸವನ್ನು ಹೊಂದಿರುವ ಅಜೀರ್ಣಾವಸ್ಥೆಯಲ್ಲಿದ್ದ ಶ್ರೀಬೊಬ್ಬರ್ಯ ದೇವಸ್ಥಾನವನ್ನು ದಾನಿಗಳು ಮತ್ತು ಊರವರ ಸಹಕಾರದಿಂದ ಜೀರ್ಣೋದ್ಧಾರ ಗೊಳಿಸಲಾಗಿದೆ.ಕೇವಲ ಮೂರು ತಿಂಗಳ ಅವಧಿಯಲ್ಲಿ ಶಿಲಾಮಯ ದೇಗುಲವನ್ನು ನಿರ್ಮಿಸಲಾಗಿದ್ದು ಎಲ್ಲವೂ ದೇವರ ಕೃಪೆಯಿಂದಲೆ ಸಾಧ್ಯವಾಗಿದೆ.ಶ್ರೀದೇವರ ಬ್ರಹ್ಮಕಲಶೋತ್ಸವವನ್ನು ನಡೆದಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ನರಸಿಂಹ ಶೆಟ್ಟಿ ನಾಗೂರು ಅವರು ಮಾತನಾಡಿ,ಹಣಬಿನ ಸೇವೆ ಶ್ರೀಬೊಬ್ಬರ್ಯ ದೇವರಿಗೆ ಅತ್ಯಂತ ಇಷ್ಟವಾದ ಸೇವೆ ಆಗಿದೆ.ಮಹಾಶಿವರಾತ್ರಿ ಯಂದು ಊರವರು ಎಲ್ಲಾ ಒಟ್ಟಿಗೆ ಸೇರಿ ಹಣಬಿನ ಸೇವೆಯನ್ನು ನೆರವೇರಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಸೇವಾ ಸಮಿತಿ ಸದಸ್ಯರು,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.ಜ್ಯೋತಿಷಿ ವಿದ್ವಾನ್ ನೀಲಾವರ ರಘುರಾಮ ಮಧ್ಯಸ್ಥರು ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

Advertisement

Share

Leave a comment

Your email address will not be published. Required fields are marked *

You cannot copy content of this page