ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ:ಮಾಜಿ ಶಾಸಕ ರಘುಪತಿ ಭಟ್

Share

ಬೈಂದೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲಿಸಲು ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ಕೊಡಿಸುವಲ್ಲಿ ಪೇಜ್ ಪ್ರಮುಖರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಉಡುಪಿ ಮಾಜಿ ಶಾಸಕರಾದ ಕೆ.ರಘುಪತಿ ಭಟ್ ಹೇಳಿದರು.
ಶಿರೂರು ಮಾತ್ರಶ್ರೀ ಸಭಾಭವನದಲ್ಲಿ ಶನಿವಾರ ನಡೆದ ಉಪ್ಪುಂದ ಮಹಾಶಕ್ತಿ ಕೇಂದ್ರದ ಪೇಜ್ ಪ್ರಮುಖ್ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಕೈಗೊಂಡಿರುವ ಬೂತ್ ಕಡೆಗೆ ಸಮೃದ್ಧ ನಡಿಗೆ ಮೂಲಕ ಈಗಾಗಲೇ ಎಲ್ಲ ಬೂತ್ ಗಳನ್ನು ಸುತ್ತಿ, ಅಲ್ಲಿನ ಕಾರ್ಯಕರ್ತರು, ಪ್ರಮುಖರು ಹಾಗೂ ಮತದಾರರೊಂದಿಗೆ ಸಭೆ ನಡೆಸಿದ್ದಾರೆ.‌ಸಂಘಟನಾತ್ಮಕವಾಗಿ ಇದೊಂದು ಮಾದರಿ ಕಾರ್ಯ ಎಂದು ಬಣ್ಣಿಸಿದರು.ಬೂತ್ ಗೆದ್ದರೆ ಕ್ಷೇತ್ರ ಗೆಲ್ಲಬಹುದು. ಬೂತ್ ಕಾರ್ಯ ಅತಿ ಮುಖ್ಯವಾಗಿದ್ದು,ಅದರಲ್ಲಿ ಪೇಜ್ ಪ್ರಮುಖರ ಕಾರ್ಯನಿರ್ವಹಣೆ ನಿರ್ಣಾಯಕವಾಗಿರುತ್ತದೆ. ಬಿಜೆಪಿ ಪರ ಮತದಾರರು ಶೇ.100ರಷ್ಟು ಮತದಾನ ಮಾಡುವಂತೆ ನೋಡಬೇಕು. ಮತ ಪ್ರಮಾಣ ಜಾಸ್ತಿ ಮಾಡುವ ಜತೆಗೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡುವಂತೆ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಮುಖಂಡರಾದ ಯತೀಶ್ ಅವರು ಮಾತನಾಡಿ,ಪೇಜ್ ಪ್ರಮುಖರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ಮಾರ್ಗದರ್ಶನ ಮಾಡಿದರು.
ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ,ಬೈಂದೂರು ಮಂಡಲ ಮೀನುಗಾರಿಕ ಪ್ರಕೋಷ್ಠ ಸಂಚಾಲಕರಾದ ಕುಮಾರ್ ಬಿ.ಎಚ್.ಕೆ.,ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಗನ್ನಾಾಥ ಮೊಗವೀರ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page