ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ರೂಟ್ ಮಾರ್ಚ್

ಕುಂದಾಪುರ:ಲೋಕ ಸಭಾ ಕ್ಷೇತ್ರ ಚುನಾವಣೆ ಹಿನ್ನೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ನಿರ್ಭಿತಿ ಯಿಂದ ಚುನಾವಣೆ ನಡೆಯಲು ಪೊಲೀಸ್ ರೂಟ್ ಮಾರ್ಚ್ ಭಾನುವಾರ ಕುಂದಾಪುರದಲ್ಲಿ ನಡೆಯಿತು.ಕುಂದಾಪುರ ಪ್ರಮುಖ ಬೀದಿಗಳಲ್ಲಿ ಪೊಲೀಸ್ ರು ಪಥಸಂಚಲನವನ್ನು ನಡೆಸಿದರು.
ಗುಜರಾತ ರಾಜ್ಯದ ಮೀಸಲು ಪಡೆ ಪೊಲೀಸ್ ಇನ್‍ಸ್ಪೆಕ್ಟರ್ ಅಶೀಕ್ ವಾಸವ ಮತ್ತು ಮೂವರು ಸಬ್ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆಯಿತು.ಬೈಂದೂರು,ಗಂಗೊಳ್ಳಿ,ಕುಂದಾಪುರ ಗ್ರಾಮೀಣ,ಕುಂದಾಪುರ,ಅಮಾವಾಸ್ಯೆ ಬೈಲು,ಶಂಕರನಾರಾಯಣ ಠಾಣೆಗಳ 50 ಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಗುಜರಾತ ಪೊಲೀಸ್ ಸುಮಾರು 70 ಸಿಬ್ಬಂದಿಗಳು ಭಾಗವಹಿಸಿದ್ದರು.ನೆಹರು ಮೈದಾನದಿಂದ ಆರಂಭಗೊಂಡ ಪೊಲೀಸ್ ರೂಟ್ ಮಾರ್ಚ್ ಶಾಸ್ತ್ರೀ ಪಾರ್ಕ್,ಪಾರಿಜಾತ ಜಂಕ್ಷನ್ ಮೂಲಕ ತಿರುಗಿ ನೆಹರು ಮೈದಾನದಲ್ಲಿ ಸಮಾಪ್ತಿಗೊಂಡಿತು.