ಚಿಣ್ಣರ ಕಲರವ 2024,ಬೇಸಿಗೆ ಶಿಬಿರ ಉದ್ಘಾಟನೆ



ಕುಂದಾಪುರ:ಚಿಣ್ಣರ ಕಲರವ 2024 ಬೇಸಿಗೆ ಶಿಬಿರ ಕಾರ್ಯಕ್ರಮ ರಾಘವೇಂದ್ರ ಅವರ ನಿರ್ದೇಶನದಲ್ಲಿ ನಾಗೂರು ಕೃಷ್ಣ ಲಲಿತ ಕಲಾಮಂದಿರದಲ್ಲಿ ಶನಿವಾರ ನಡೆಯಿತು.ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಚಿಣ್ಣರ ಕಲರವ ಬೇಸಿಗೆ ಶಿಬಿರದಲ್ಲಿ ವಿದ್ಯಾಥಿಗಳಿಗೆ ಮುಖವಾಡ ತಯಾರಿಕೆ,ಕವನ ಕಟ್ಟುವುದು,ಪೇಪರ್ ಕ್ರಾಫ್ಟ್,ಬಣ್ಣಗಳ ಜೊತೆ ಆಟ,ಹಾಡು ಪಾಡು ಎಂಬ ವಿಷಯದ ಬಗ್ಗೆ ತರಬೇತಿಯನ್ನು ನೀಡಲಾಯಿತು.ವಿಶೇಷ ಆರ್ಕಷಣೆಯ ಜಾದು ವಿಷ್ಮಯವನ್ನು ಪ್ರದರ್ಶಿಸಲಾಯಿತು.
ರತ್ನಾಕರ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶಿಕ್ಷಣದ ಜತೆಗೆ ಬೇರೆ ಬೇರೆ ರೀತಿಯ ತರಬೇತಿ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಉತ್ತಮವಾದ ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಬಿರದ ನಿರ್ದೇಶಕರಾದ ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಮಕ್ಕಳ ಭವಿಷ್ಯದಲ್ಲಿ ವ್ಯಕ್ತಿತ್ವ ವಿಕಾಸನಗೊಳಿಸಲು ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರಯೋಜನಾಕಾರಿ ಆಗಿರುತ್ತದೆ ಎಂದು ಹೇಳಿದರು.ಇವೊಂದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ಡಾ.ಪ್ರವೀಣ್ ಶೆಟ್ಟಿ ಮಾತನಾಡಿ,ಯಾವುದೇ ರೀತಿಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಅದರ ಹಿಂದೆ ಬಹಳಷ್ಟು ಶ್ರಮ ಅಡಗಿರುತ್ತದೆ.ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳಿಗೆ ಒಂದಿಷ್ಟು ತರಬೇತಿಯನ್ನು ನೀಡಿ ಅವರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ ಪ್ರಯೋಜನೆ ಮಕ್ಕಳಿಗೆ ದೊರಕಲಿ ಎಂದು ಹೇಳಿದರು.
ಮಂಜುನಾಥ ಕಾರಂತ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.ಶಿಕ್ಷಕರಾದ ದಿನೇಶ.ವಿ ಮತ್ತು ಶೇಖರ ದೇವಾಡಿ ಅವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.ಈ ಸಂದರ್ಭದಲ್ಲಿ ವಂದನಾ,ವಸಂತಿ,ಚೇತನ,ಶಿಕ್ಷಕರಾದ ಸುರೇಶ ಉಪಸ್ಥಿತರಿದ್ದರು.





















































































































































































































































































































































































































































































































































































































































































































































































































































































































































































































































































































































































































































































































































































































































































