ಶ್ರೀಸೀತಾರಾಮಚಂದ್ರ ದೇವರ ಕಲ್ಯಾಣೋತ್ಸವ


ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣಮಹೋತ್ಸವ ಅಂಗವಾಗಿ ಶ್ರೀಸೀತಾರಾಮಚಂದ್ರ ದೇವರ ಕಲ್ಯಾಣೋತ್ಸವ ಡಾ.ಎ ಚೆನ್ನಕೇಶವ ಗಾಯತ್ರಿ ಭಟ್ ಗಜಪುರ ಆನಗಳ್ಳಿ ಅವರ ನೇತೃತ್ವದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.ಸೀತಾ ದೇವಿ ಮೂರ್ತಿಯನ್ನು ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನ ದಿಂದ ಹಾಗೂ ಶ್ರೀರಾಮ ದೇವರ ಮೂರ್ತಿಯನ್ನು ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದ ಬಳಿಯಿಂದ ಪೂರ್ಣ ಕುಂಭ ಕಲಶದೊಂದಿಗೆ ಭವ್ಯ ಮೆರವಣಿಗೆ ಮೂಲಕ ಶ್ರೀರಾಮ ದೇವಸ್ಥಾನ ಕಂಚುಗೋಡುನಲ್ಲಿ ಎದುರುಗೊಳಿಸಲಾಯಿತು.
ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ದೇವರಿಗೆ ಆರತಿ ಬೆಳಗಿ ಪೂಜೆಯನ್ನು ಮಾಡಿದರು.ಬಳಿಕ ಆಶೀರ್ವಚನ ನೀಡಿ ಮಾತನಾಡಿ, ಶ್ರೀದೇವರ ಕಲ್ಯಾಣೋತ್ಸವದಿಂದ ಲೋಕಕ್ಕೆ ಒಳಿತಾಗಲಿ ಎಂದು ಶುಭಾ ಹಾರೈಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಎಲ್ಲಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.











































































































































































































































































































































































































































































































































































































































































































































































































































































































































































































































































































































































































































































































































































































































































