ಡಾ.ಶ್ರೇಯಸ್ ರಾವ್.ಜಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ
ಡಾ. ಶ್ರೇಯಸ್ ರಾವ್ ಜಿ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ 651ನೇ ರ್ಯಾಂಕ್ ಪಡೆದಿದ್ದಾರೆ.ಶಿಕ್ಷಕಿ ಸುಶೀಲ ಯು.ಎಸ್ ಅವರ ಸುಪುತ್ರರಾದ ಅವರು ವೈದ್ಯಕೀಯ ಪದವೀಧರರಾಗಿದ್ದು ಕಳೆದ ಎರಡು ವರ್ಷದಿಂದ ಉಡುಪಿ ಅಂಬಲಪಾಡಿ ಮೆಡಿಕಲ್ ಸೆಂಟರ್ ನಲ್ಲಿ ರೇಡಿಯಾಲಾಜಿಸ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಯಾವುದೇ ಕೋಚಿಂಗ್ ಪಡೆಯದೇ ಈ ಸಾಧನೆ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.