ಲಾರಿಗೆ ಕಾರು ಡಿಕ್ಕಿ,ಇಬ್ಬರಿಗೆ ಗಾಯ

Share

ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಲಾರಿ ಮತ್ತು ಕಾರು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವಿನ್ ಭಟ್ (32) ಕಿರಿಮಂಜೇಶ್ವರ ಮತ್ತು ಜಯಂತ ಭಟ್ ಅವರು ಗಂಭೀರ ಸ್ವರೂಪದ ಗಾಯದೊಂದಿಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ಹಿಂಭಾಗಗಕ್ಕೆ ಅದೆ ಮಾರ್ಗದಲ್ಲಿ ವೇಗದಿಂದ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.ಒಂದೆ ವಾರದ ಒಳಗೆ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಸಂಭವಿಸಿದ ಮೂರನೇ ಅಪಘಾತವಾಗಿದೆ.

Advertisement

Share

Leave a comment

Your email address will not be published. Required fields are marked *

You cannot copy content of this page