ಅಷ್ಟಪವಿತ್ರ ನಾಗಮಂಡಲೋತ್ಸವ,ಮಹಾ ಅನ್ನಸಂತರ್ಪಣೆ






ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾಮಿರ್ಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಭಾನುವಾರ ನಡೆಯಿತು.
ಶ್ರೀನಾಗದೇವರ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಫಲ ಸರ್ಮಣೆ,ಗುರುಗಣಪತಿ ಪೂಜೆ,ಕಲಶಾಭೀಷೆಕ,ಮಹಾಪೂಜೆ,ನಾಗ ದರ್ಶನ,ತೀರ್ಥಪ್ರಸಾದ ವಿತರಣೆ,ಮಹಾಅನ್ನಸಂತರ್ಪಣೆ,ಹಾಲಿಟ್ಟು ಸೇವೆ,ದೇವರ ದರ್ಶನ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ವಿಧಿವಿಧಾನದೊಂದಿಗೆ ಸಂಪ್ರದಾಯ ಬದ್ಧವಾಗಿ ಜರುಗಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀನಾಗ ದೇವರ ಮಹಾ ಅನ್ನಪ್ರಸಾದವನ್ನು ಸ್ವೀಕರಿಸಿದರು.ಶ್ರೀಕ್ಷೇತ್ರದ ಪ್ರಧಾನ ದೇವರಾದ ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ,ಆಂಜನೇಯ ಸ್ವಾಮಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮಧರ್ಶಿ ಜಯರಾಮ ಸ್ವಾಮಿ,ಅಪ್ಪಣ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.