ಬೈಂದೂರು ಕ್ಷೇತ್ರದ ಜನರು ಪೊಳ್ಳು ಹಿಂದುತ್ವವಾದಿಗಳ ಮಾತನ್ನು ನಂಬಲ್ಲ- ಬಿ.ವೈ.ರಾಘವೇಂದ್ರ


ಬೈಂದೂರು:ಪಕ್ಷದ ಚೌಕಟ್ಟಿನಲ್ಲಿ ಪಕ್ಷವೇ ಘೋಷಣೆ ಮಾಡಿದ ಅಭ್ಯರ್ಥಿ ಚುನಾವಣಾ ಅಖಾಡದಲ್ಲಿ ಇರುವಾಗ ಬೇರೊಬ್ಬ ವ್ಯಕ್ತಿ ಏನನ್ನು ಹೇಳಿದರು ಜನರು ಅದು ನಂಬಲ್ಲ ಮತದಾರರು ಸಾಕಷ್ಟು ಬುದ್ಧಿವಂತರಿದ್ದಾರೆ.ಹಿಂದುತ್ವ ವಿಚಾರದಲ್ಲಿ ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಬೈಂದೂರು ತಾಲೂಕಿನ ನಾಗೂರಿನಲ್ಲಿ ಮಂಗಳವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ.ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ಪ್ರಚಾರವನ್ನು ಮಾಡಿ,ರಾಘವೇಂದ್ರ ಅವರಿಗೆ ಹಾರೈಸಿ,ಆಶೀರ್ವಾದ ಮಾಡಿದ್ದಾರೆ. ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ ಎಂದರು.
ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ
ದೇಶದಲ್ಲಿರುವ ಎಲ್ಲರೂ ಹಿಂದೂ ವಾದಿಗಳು.ನಾನು ಮಾತೃವಲ್ಲ, ಬಿ.ಎಸ್. ಯಡಿಯೂರಪ್ಪನವರು
ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದ ಕರಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡವರು, ಆರೆಸ್ಸೆಸ್ ಪ್ರಚಾರಕರಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟ ಇರಬಹುದು, ಮುರಳಿ ಮನೋಹರ್ ಜೋಶಿಯವರು ಕರೆಕೊಟ್ಟ ಸಂದರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ದಾಳಿಯ ಮಧ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗವಹಿಸಿದ್ದರು.ಹೀಗಾಗಿ ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶನ ಮಾಡುವ ಅವಶ್ಯಕತೆ ನಮಗಿಲ್ಲ ಎಂದರು.
ಬಿಎಸ್ವೈ ಯೋಜನೆ ಬಲ
ಯಡಿಯೂಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಂದಿರುವ ಒಂದೊಂದು ಯೋಜನೆಯನ್ನು ಜನ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಗೋ ಹತ್ಯೆ ನಿಷೇಧಕ್ಕೆ ಬಿಗಿ ಕಾನೂನು ತಂದಿದ್ದಾರೆ.ಭಾಗ್ಯ ಲಕ್ಷ್ಮೀ ಯೋಜನೆ ಮೂಲಕ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ದೊಡ್ಡ ಪ್ರಯತ್ನ ಮಾಡಿದ್ದಾರೆ.ಕನಕದಾಸ ಜಯಂತಿ,ವಾಲ್ಮೀಕಿ ಜಯಂತಿ ಸೇರಿ ಅನೇಕ ಮಹನೀಯರ ಜಯಂತಿ, ಎಲ್ಲ ಮಠ ಮಂದಿರಗಳ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಚುನಾವಣೆಗಾಗಿ ಹಿಂದುತ್ವ ನಮ್ಮದಲ್ಲ. ವೋಟಿಗಾಗಿ ಹಿಂದುತ್ವ ಬಳಸಿಕೊಳ್ಳುವವರಿಂದ ಪಾಠ ಅಗತ್ಯವಿಲ್ಲ ಎಂದು ಹೇಳಿದರು.
ಎರಡು ವಾರದಲ್ಲಿ ಏನಾಯ್ತಿ?:-
ಯಡಿಯೂರಪ್ಪನವರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಂಡಿದೆ ಮತ್ತು ಕಾಣುತ್ತಿದೆ ಎಂದು ಕಳೆದ ಎರಡು ವಾರದ ಕೆಳಗೆ ಈಶ್ವರಪ್ಪನವರು ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಆಧಿಕ ಅಂತರದಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವರ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.





















































































































































































































































































































































































































































































































































































































































































































































































































































































































































































































































































































































































































































































































































































































































































